ವೈಕುಂಠ ಏಕಾದಶಿ ನಿಮಿತ್ತ ವೆಂಕಟೇಶ್ವರ ಸ್ವಾಮಿ ದೇಗುಲಗಳಲ್ಲಿ ದಿನವಿಡೀ ಮಂಗಳ ವಾದ್ಯ - Ekadashi celebration 2020
🎬 Watch Now: Feature Video

ತುಮಕೂರು: ವೈಕುಂಠ ಏಕಾದಶಿ ಪ್ರಯುಕ್ತ ಜಿಲ್ಲೆಯಾದ್ಯಂತ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಬಟವಾಡಿ ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಮೂರ್ತಿಗೆ ತಿರುಪತಿಯಿಂದ ಬಂದಿದ್ದ ಪುರೋಹಿತರು ವಿಭಿನ್ನವಾಗಿ ಅಲಂಕಾರ ಮಾಡಿದ್ದರು. ಗರ್ಭಗುಡಿಯಲ್ಲಿ ಕೇವಲ ದೀಪಗಳನ್ನು ಹಚ್ಚಿ ಶ್ರೀ ವೆಂಕಟೇಶ್ವರ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ದಿನವಿಡೀ ನಿರಂತರವಾಗಿ ಮಂಗಳ ವಾದ್ಯವನ್ನು ನುಡಿಸಿದ್ದು ವಿಶೇಷವಾಗಿತ್ತು.