ವೈಕುಂಠ ಏಕಾದಶಿ ಹಿನ್ನೆಲೆ ವೆಂಕಟೇಶ್ವರ ದೇಗುಲಕ್ಕೆ ಹರಿದು ಬಂದ ಭಕ್ತರ ದಂಡು - Ranibennuru Vagisha nagar
🎬 Watch Now: Feature Video
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಭಕ್ತರು ವೆಂಕಟೇಶ್ವರನ ಸನ್ನಿಧಿಗೆ ಸಾಗರದೋಪಾದಿಯಲ್ಲಿ ಬಂದು ಆಶೀರ್ವಾದ ಪಡೆದರು. ರಾಣೆಬೆನ್ನೂರಿನ ವಾಗೀಶ ನಗರದಲ್ಲಿರುವ ವೆಂಕಟೇಶ್ವರ ಮೂರ್ತಿಗೆ ಬೆಳಿಗ್ಗಿನ ವೇಳೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಬಂಗಾರ, ಬೆಳ್ಳಿ ಆಭರಣಗಳಿಂದ ಮೂರ್ತಿಯನ್ನು ಅಲಂಕೃತಗೊಳಿಸಲಾಯಿತು. ವೈಕುಂಠ ಏಕಾದಶಿ ದಿನದಂದು ಭಕ್ತರು ವೆಂಕಟೇಶ್ವರನನ್ನು ಉತ್ತರ ಭಾಗದಿಂದ ದರ್ಶನ ಮಾಡಬೇಕು ಎಂಬ ಪ್ರತೀತಿ ಇದ್ದು, ಎಲ್ಲಾ ಭಕ್ತರು ವೈಕುಂಠ ದ್ವಾರದ ಮೂಲಕ ಆಗಮಿಸಿ ಆಶೀರ್ವಾದ ಪಡೆದರು.