ಭಿಕ್ಷುಕರ ನೆಪದಲ್ಲಿ ಕೋಳಿ ಕಳ್ಳತನ, ಅಬ್ಬಾ..ಇವ್ರು ಕದಿಯುವ ಸ್ಟೈಲ್ ನೋಡಿ ಹೇಗಿದೆ.. - Santur village near Kapu in Udupi district

🎬 Watch Now: Feature Video

thumbnail

By

Published : Jan 24, 2021, 5:50 PM IST

ವೃದ್ಧ ಜೋಡಿ ಮನೆಗೆ ಬಂದು, ಮನೆಯಲ್ಲಿ ಯಾರು ಇಲ್ಲ ಅನ್ನೋದನ್ನು ಖಾತ್ರಿ ಪಡಿಸಿಕೊಂಡ ಮೇಲೆ ಮನೆಯಂಗಳದಲ್ಲಿ ಹಾಯಾಗಿ ಕುಳಿತುಕೊಳ್ತಾರೆ. ಮೊದಲು ಕೋಳಿಗಳಿಗೆ ಕಾಳು ಹಾಕುತ್ತಾರೆ. ಒಮ್ಮೆ ಈ ಕೋಳಿಗಳು ಇವರಿಗೆ ಹೊಂದಿಕೊಂಡರೆ ಮುಗೀತು, ಕೆಲವೇ ಕ್ಷಣದಲ್ಲಿ ಕಾಳು ಹಾಕಿದ ಕೈಯಿಂದಲೇ ಕೋಳಿಯ ಕತ್ತು ಹಿಸುಕುತ್ತಾರೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಕತ್ತು ಹಿಸುಕಿದ ಕೋಳಿಯನ್ನು ಜೋಳಿಗೆಯಲ್ಲಿ ತುಂಬಿಸಿಕೊಳ್ಳುತ್ತಾರೆ. ಈ ಕೋಳಿ ಕದಿಯುವ ಖತರ್ನಾಕ್ ಸ್ಟೈಲ್ ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಕಾಪು ಸಮೀಪದ ಸಾಂತೂರ್ ಗ್ರಾಮದ ಮುದರಂಗಡಿಯಲ್ಲಿ ಕೋಳಿ ಕಳ್ಳತನ ನಡೆದಿದೆ. ಬೇಬಿ ಪೂಜಾರ್ತಿ ಎಂಬುವರ ಮನೆಯಲ್ಲಿ ಈ ಚಾಲಾಕಿ ಕೃತ್ಯವನ್ನು ಮನೆಯ ಮಹಿಳೆಯೊಬ್ಬರು ಮೊಬೈಲ್​ನಲ್ಲಿ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.