ನಿರ್ಗತಿಕರು, ಭಿಕ್ಷುಕರು, ಪ್ರಯಾಣಿಕರಿಗೆ ಊಟ-ನೀರು ಹಂಚಿ ಯುವಕರ ಮಾನವೀಯತೆ
🎬 Watch Now: Feature Video
ಕೊರೊನಾ ವೈರಸ್ ಸೋಂಕು ಹರಡದಂತೆ ಪರಿಣಾಮಕಾರಿಯಾಗಿ ಪ್ರಧಾನಿ ಮೋದಿ ಘೋಷಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಧಾರವಾಡ ಸಂಪೂರ್ಣ ಸ್ಥಗಿತಗೊಂಡಿದೆ. ಹೋಟೆಲ್, ರೆಸ್ಟೋರೆಂಟ್, ಬಾರ್, ಕ್ಲಬ್ಗಳನ್ನು ಬಂದ್ ಮಾಡಲಾಗಿದೆ. ಈ ವೇಳೆಯಲ್ಲಿ ನಗರದ ಪಾಪು ಸಾಬಜಿ, ಶಾಬಾಜಿ ಸಾಬಜಿ ಎಂಬ ಯುವಕರು ಮನೆಯಲ್ಲಿಯೇ ಆಹಾರ ತಯಾರಿಸಿಕೊಂಡು ಬಂದು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿದ್ದ ನಿರ್ಗತಿಕರು, ಭಿಕ್ಷುಕರು, ಪ್ರಯಾಣಿಕರು ಸೇರಿದಂತೆ ಹಲವರಿಗೆ ಉಚಿತವಾಗಿ ಊಟ, ನೀರು ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯುವಕರ ಸಾಮಾಜಿಕ ಸೇವೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Last Updated : Mar 22, 2020, 4:13 PM IST