ಮಂಗಳೂರಲ್ಲಿ ಹಿಂಸಾಚಾರ: ಪ್ರತಿಭಟನೆ ವೇಳೆ ಇಬ್ಬರು ಸಾವು - ಮಂಗಳೂರು ಪೌರತ್ವ ಕಾಯ್ದೆ ಪ್ರತಿಭಟನೆ ಸುದ್ದಿ
🎬 Watch Now: Feature Video
ಮಂಗಳೂರು: ಗುರುವಾರ ನಗರದಲ್ಲಿ ಸಿಎಬಿ ವಿರುದ್ಧ ಬಂದರು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದ ಉದ್ರಿಕ್ತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಚದುರಿಸಲು ಹರಸಾಹಸಪಟ್ಟರು. ಇದರಲ್ಲಿ ಕುದ್ರೋಳಿಯ ಓರ್ವ ನಿವಾಸಿ, ಮತ್ತೋರ್ವ ಬೆಂಗ್ರೆ ನಿವಾಸಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಇದರ ವರದಿ ಬಂದ ಬಳಿಕವೇ ಈ ಇಬ್ಬರ ಸಾವಿಗೆ ಕಾರಣ ತಿಳಿಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಹರ್ಷಾ ತಿಳಿಸಿದ್ದಾರೆ.
Last Updated : Dec 20, 2019, 9:42 AM IST