ಬೀದಿಬದಿ ಅಂಗಡಿಗಳ ತೆರವಿಗೆ ನಗರ ಪಾಲಿಕೆ ಆದೇಶ.. ಆತಂಕದಲ್ಲಿ ವ್ಯಾಪಾರಸ್ಥರು - Tumukur City Municipality
🎬 Watch Now: Feature Video
ತುಮಕೂರು: ಬೀದಿ ಬದಿ ಅಂಗಡಿಗಳ ತೆರವಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಆದೇಶ ನೀಡಿದ್ದು, ಸಣ್ಣ ಪುಟ್ಟ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ. ನಗರದ ಪ್ರಶಾಂತ ಥಿಯೇಟರ್ ಮತ್ತು ಖಾಸಗಿ ಬಸ್ ನಿಲ್ದಾಣದ ಮಧ್ಯೆ ವಿನಾಯಕ ನಗರಕ್ಕೆ ಹಾದುಹೋಗುವ ರಸ್ತೆಯ ಪುಟ್ಪಾಥ್ ಮೇಲೆ ಕಳೆದ 15 ವರ್ಷಗಳಿಂದ ಸಣ್ಣ ಪುಟ್ಟ ಅಂಗಡಿ ಮಳಿಗೆಗಳನ್ನು ಇಟ್ಟುಕೊಂಡು ಹಲವಾರು ಜನರು ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಈ ಜಾಗವನ್ನು ತೆರವುಗೊಳಿಸಬೇಕೆಂದು ಮಹಾನಗರದ ಪಾಲಿಕೆ ಅಧಿಕಾರಿಗಳು ಆದೇಶ ನೀಡಿದ್ದು, ವ್ಯಾಪಾರಿಗಳನ್ನು ಕಂಗೆಡಿಸಿದೆ. ಅಂಗಡಿ ತೆರವುಗೊಳಿಸಬೇಕಾದರೆ ನಮಗೆ ಬದಲಿ ವ್ಯವಸ್ಥೆ ಮಾಡಿಕೊಡಬೇಕು. ಬಲವಂತವಾಗಿ ತೆರವುಗೊಳಿಸಲು ಮುಂದಾದರೆ ಪಾಲಿಕೆ ಕಚೇರಿ ಮುಂದೆ ವಿಷ ಕುಡಿಯಲು ಹಿಂಜರಿಯುವುದಿಲ್ಲ ಎಂದಿದ್ದಾರೆ ವ್ಯಾಪಾರಿಗಳು.