ನವದೆಹಲಿ: ಧ್ಯಾನ ಮತ್ತು ನಾಯಕತ್ವ ಕುರಿತಾದ ಪಾಠಗಳು, ಪರೀಕ್ಷೆಗಳು ಮತ್ತು ಜ್ಞಾನ ಹಾಗೂ ಆಟವಾಡುತ್ತಿರುವ ಬ್ಯಾಟರ್‌ಗಳಂತೆ ಗಮನ ಕೇಂದ್ರೀಕರಿಸುವುದು ಸೇರಿದಂತೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಸಾರವಾದ ತಮ್ಮ ವಾರ್ಷಿಕ 'ಪರೀಕ್ಷಾ ಪೇ ಚರ್ಚಾ'ದ ಎಂಟನೇ ಆವೃತ್ತಿಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅನೌಪಚಾರಿಕ ರೀತಿಯ ಸಂವಾದಕ್ಕೆ ಆದ್ಯತೆ: ಸಾಂಪ್ರದಾಯಿಕವಾಗಿ ಟೌನ್ ಹಾಲ್ ಸ್ವರೂಪದಲ್ಲಿ ನಡೆಯುತ್ತಿದ್ದ ಚರ್ಚೆಯ ಸ್ವರೂಪವನ್ನು ಈ ಬಾರಿ ಬದಲಾಯಿಸಲಾಗಿತ್ತು. ಈ ಬಾರಿ ಮೋದಿ ಹೆಚ್ಚು ಅನೌಪಚಾರಿಕ ರೀತಿಯ ಸಂವಾದಕ್ಕೆ ಆದ್ಯತೆ ನೀಡಿದರು ಮತ್ತು ಇಲ್ಲಿನ ಸುಂದರ್ ನರ್ಸರಿಯಲ್ಲಿ ಸುಮಾರು 35 ವಿದ್ಯಾರ್ಥಿಗಳೊಂದಿಗೆ ಉತ್ಸಾಹಭರಿತ ಸಂಭಾಷಣೆ ನಡೆಸಿದರು. ಈ ಕಾರ್ಯಕ್ರಮದ ರಾಷ್ಟ್ರವ್ಯಾಪಿ ಪ್ರಸಾರದಲ್ಲಿ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು. ಜ್ಞಾನ ಮತ್ತು ಪರೀಕ್ಷೆಗಳು ಎರಡು ವಿಭಿನ್ನ ವಿಷಯಗಳು ಎಂದು ಮೋದಿ ವಿದ್ಯಾರ್ಥಿಗಳಿಗೆ ಹೇಳಿದರು. ಪರೀಕ್ಷೆಗಳನ್ನು ಜೀವನದ ಸರ್ವಸ್ವ ಮತ್ತು ಅಂತ್ಯ ಎಂದು ನೋಡಬಾರದು ಎಂದು ತಿಳಿಸಿದರು.
ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಿ ಹೇಳಿದ್ದು:
- ಜ್ಞಾನ ಮತ್ತು ಪರೀಕ್ಷೆಗಳು ಎರಡು ವಿಭಿನ್ನ ವಿಷಯಗಳು
- ಸಮಯವನ್ನು ಯೋಜಿತ ರೀತಿಯಲ್ಲಿ ಬಳಸಿ
- ತಮ್ಮ ಮಕ್ಕಳನ್ನು ಪೋಷಕರು ಯಾವುದೋ ಒಂದು ವಿಚಾರಕ್ಕೆ ಸೀಮಿತಗೊಳಿಸಬಾರದು. ಮಾಡೆಲ್‌ಗಳಾಗಿ ತೋರಿಸಲು ಬಳಸಬಾರದು
- ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಬಾರದು, ಬೆಂಬಲಿಸಿ
- ವಿದ್ಯಾರ್ಥಿಗಳು ಈ ಕ್ಷಣದಲ್ಲಿ ಬದುಕಿ
- ನಿಮ್ಮನ್ನು ನೀವು ಸವಾಲುಗಳಿಗೆ ಒಡ್ಡಿಕೊಳ್ಳಿ
- ಸಕಾರಾತ್ಮಕ ಅಂಶಗಳನ್ನು ಕಂಡುಕೊಳ್ಳಿ
- ಹೆಚ್ಚಿನ ಅಂಕ ಬರದಿದ್ದರೆ ಜೀವನ ಹಾಳಾಗುತ್ತದೆ ಎಂದು ಭಾವಿಸಬಾರದು. ಪರೀಕ್ಷೆಗಳನ್ನು ಜೀವನದ ಸರ್ವಸ್ವ ಮತ್ತು ಅಂತ್ಯ ಎಂದು ನೋಡಬೇಡಿ.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ, ವಿದ್ಯಾರ್ಥಿಗಳನ್ನು ಯಾವುದೋ ಒಂದು ವಿಚಾರಕ್ಕೆ ಸೀಮಿತಗೊಳಿಸಬಾರದು ಮತ್ತು ತಮ್ಮ ಉತ್ಸಾಹಗಳನ್ನು ಅನ್ವೇಷಿಸಲು ಅವರಿಗೆ ಅವಕಾಶ ನೀಡಬೇಕು ಎಂದರು. ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಸಮಯವನ್ನು ಯೋಜಿತ ರೀತಿಯಲ್ಲಿ ಬಳಸಬೇಕೆಂದು ಕರೆ ಕೊಟ್ಟರು.
ಸಮಯವನ್ನು ಸದುಪಯೋಗಪಡಿಸಿಕೊಂಡರೆ ನಿಮ್ಮ ಜೀವನವನ್ನು ನೀವು ನಿಯಂತ್ರಿಸಿಕೊಳ್ಳಬಹುದು, ಈ ಕ್ಷಣದಲ್ಲಿ ಬದುಕಿ, ಸಕಾರಾತ್ಮಕ ಅಂಶಗಳನ್ನು ಕಂಡುಕೊಳ್ಳಿ, ಅಭಿವೃದ್ಧಿ ಹೊಂದಲು ಪೋಷಿಸಿ ಮುಂತಾದ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡಿದರು, ವಿದ್ಯಾರ್ಥಿಗಳು ವಿವಿಧ ವಿಷಯಗಳ ಬಗ್ಗೆ ಅವರನ್ನು ಪ್ರಶ್ನಿಸಿದರು.
ಪೋಷಕರು ತಮ್ಮ ಮಕ್ಕಳನ್ನು ಮಾಡೆಲ್‌ಗಳಾಗಿ ತೋರಿಸಲು ಬಳಸಬಾರದು ಎಂದು ಒತ್ತಾಯಿಸಿದ ಪ್ರಧಾನಿ ಮೋದಿ, ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಬಾರದು, ಬದಲಿಗೆ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.
"ದುರದೃಷ್ಟವಶಾತ್ ಯಾರಾದರೂ 10 ಮತ್ತು 12ನೇ ತರಗತಿ ಬೋರ್ಡ್‌ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸದಿದ್ದರೆ, ಅವರ ಜೀವನವು ಹಾಳಾಗುತ್ತದೆ ಎಂಬ ಸಾಮಾನ್ಯ ನಂಬಿಕೆ ಇದೆ. ಕಡಿಮೆ ಅಂಕ ಬಂದರೆ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ. ನೀವು ಒತ್ತಡದಲ್ಲಿರಬಹುದು ಆದರೆ ಅದರ ಬಗ್ಗೆ ಚಿಂತಿಸದೆ ಸಿದ್ಧರಾಗಿ ಮತ್ತು ನಿಮ್ಮನ್ನು ನೀವು ಸವಾಲುಗಳಿಗೆ ಒಡ್ಡಿಕೊಳ್ಳಿ" ಎಂದು ಅವರು ಹೇಳಿದರು.
ಉತ್ತಮ ನಿದ್ರೆಯ ಮಹತ್ವವನ್ನು ತಿಳಿಸಿದ ಪ್ರಧಾನಿ, ಹೆಚ್ಚಿನ ಅಂಕ ಬರದಿದ್ದರೆ ಜೀವನ ಹಾಳಾಗುತ್ತದೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು ಎಂದು ಒತ್ತಿ ಹೇಳಿದರು.