22 ವರ್ಷದಲ್ಲಿ ಇದು 3ನೇ ಸರಳ ದಸರಾ: ನಿವೃತ್ತ ಹೆಡ್ ಕಾನ್ಸ್ಟೇಬಲ್ನ ಮನದಾಳದ ಮಾತು - ನಾಡಹಬ್ಬ
🎬 Watch Now: Feature Video
ಮೈಸೂರು: ನಾಡಹಬ್ಬ ದಸರಾವನ್ನು ಇಲ್ಲಿಯವರೆಗೆ 3 ಬಾರಿ ಸರಳವಾಗಿ ಆಚರಿಸಲಾಗಿದೆ ಎಂದು ಕಳೆದ 22 ವರ್ಷಗಳಿಂದ ದಸರಾ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿರುವ ನಿವೃತ್ತ ಹೆಡ್ ಕಾನ್ಸ್ಟೇಬಲ್ ಬಾಬು ಎಂಬುವವರು ಈಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಸರಾದ ಹಲವು ಕಾರ್ಯಕ್ರಮಗಳಲ್ಲಿ ನಾನು ಕಳೆದ 22 ವರ್ಷಗಳಿಂದ ನಿರೂಪಣೆ ಮಾಡುತ್ತಿದ್ದೇನೆ. 1980ರಲ್ಲಿ ಗುಂಡೂರಾವ್ ಸಿಎಂ ಆದ ಸಂದರ್ಭ ರಾಜ್ಯದಲ್ಲಿ ಬರ ಇದ್ದ ಕಾರಣ ನಾಡಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ನಂತರ 2002ರಲ್ಲಿ ರಾಜ್ಕುಮಾರ್ ಅಪಹರಣವಾದ ಹಿನ್ನೆಲೆ ಸರಳ ದಸರಾವನ್ನು ಆಚರಿಸಲಾಯಿತು. ಇದೀಗ 2020ರಲ್ಲಿ ಸರಳ ದಸರಾವನ್ನು ಕೋವಿಡ್ ಕಾರಣದಿಂದಾಗಿ ಆಚರಿಸಲಾಗುತ್ತಿದೆ. ಈ ಮೂರು ಬಾರಿಯೂ ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಸರಳ ರೀತಿಯಲ್ಲಿ ಆಚರಿಸಲಾಗಿದೆ ಎಂದರು.