'ಬೇಡುವೆನು ವರವನ್ನು ಏಡ್ಸ್ ಇಲ್ಲದ ನಾಡನ್ನು' ಎಂಬ ಘೋಷವಾಕ್ಯದೊಂದಿಗೆ ಗಣಿನಾಡಲ್ಲಿ ಜಾಗೃತಿ - frontier AIDS awareness program
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5346221-thumbnail-3x2-blr.jpg)
ಬಳ್ಳಾರಿ: ಬೇಡುವೆನು ವರವನ್ನು ಏಡ್ಸ್ ಇಲ್ಲದ ನಾಡನ್ನು ಎಂಬ ಘೋಷವಾಕ್ಯದ ನಾಮಫಲಕಗಳು ಗಣಿನಗರಿ ಬಳ್ಳಾರಿಯಲ್ಲಿ ರಾರಾಜಿಸಿದವು. ಏಡ್ಸ್ ಜಾಗೃತಿಯ ಘೋಷವಾಕ್ಯವನ್ನಿಟ್ಟುಕೊಂಡು ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಬಳ್ಳಾರಿಯ ಪ್ರಮುಖ ಬೀದಿಗಳಲ್ಲಿ ಬುಲೆಟ್ ಬೈಕ್ಗಳ ಮೂಲಕ ಜಾಗೃತಿ ಮೂಡಿಸಿದರು. ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುಂಡ್ಲೂರು ಪ್ರಭಂಜನಕುಮಾರ ನೇತೃತ್ವದಲ್ಲಿ ನೂರಾರು ಯುವಜನರು ಬೆಳಿಗ್ಗೆ 9 ಗಂಟೆಗೆ ಡಾ. ರಾಜ್ ರಸ್ತೆಯಿಂದ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ಗಳ ಮೂಲಕ ಮೆರವಣಿಗೆ ಆರಂಭಿಸಿದರು.