ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಬಳೆ ಕದ್ದೊಯ್ದ ಖತರ್ನಾಕ್ ಕಳ್ಳಿಯರು!- ವಿಡಿಯೋ - Gold theft in consumer disguise
🎬 Watch Now: Feature Video
ಬೆಂಗಳೂರು: ಗ್ರಾಹಕರ ವೇಷ ಧರಿಸಿ ಚಿನ್ನದ ಬಳೆ ಖರೀದಿ ಸೋಗಿನಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹಲಸೂರಿನ ಬಜಾರ್ ಸ್ಟ್ರೀಟ್ ಮನೋಹರ್ ಜ್ಯೂವೆಲ್ಲರಿ ಶಾಪ್ನಲ್ಲಿ ಡಿ.5ರಂದು ಈ ಘಟನೆ ನಡೆದಿದೆ. ಮಾಲೀಕ ಜಿ.ಎನ್.ಕಮಲ್ ನೀಡಿದ ದೂರಿನ ಮೇರೆಗೆ ಚೋರರ ವಿರುದ್ಧ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.