ಒಂದೆರೆಡು ದಿನಗಳಲ್ಲಿ ಸಿಡಿಲೇಡಿ ವಿಚಾರದ ಸತ್ಯಾಂಶ ತಿಳಿಯಲಿದೆ : ನಾರಾಯಣಗೌಡ - ಕೋಲಾರ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಕೋಲಾರ : ಸಿಡಿಲೇಡಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೆರೆಡು ದಿನಗಳಲ್ಲಿ ಸತ್ಯಾಂಶ ತಿಳಿಯುತ್ತದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು. ಇಂದು ಕೋಲಾರಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿಲೇಡಿ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯಾಂಶ ಇನ್ನೂ ಹೊರ ಬಂದಿಲ್ಲ. ಸತ್ಯಾಂಶ ಹೊರ ಬಂದರೆ ಮಾಧ್ಯಮದವರಿಗೆ ಮೊದಲು ತಿಳಿಯುತ್ತದೆ ಎಂದರು. ಆ ಯುವತಿ ಮೆಡಿಕಲ್ ಟೆಸ್ಟ್ಗೆ ಕಾಲಾವಕಾಶ ಬೇಕು ಎಂದು ಹೇಳುತ್ತಿದ್ದಾಳೆ. ಹೀಗಾಗಿ, ಮೆಡಿಕಲ್ ಆದ ನಂತರ ಸಂತ್ಯಾಂಶ ಗೊತ್ತಾಗುತ್ತದೆ ಎಂದರು. ಈ ವಿಚಾರದಲ್ಲಿ ಯಾರೂ ದೊಡ್ಡವರು ಎನ್ನುವ ಪ್ರಶ್ನೆ ಇಲ್ಲ. ಯಾರೂ ಕೂಡ ಯಾರಿಗೂ ಹೆದುರುವುದಿಲ್ಲ ಎಂದರು. ಪ್ರಕರಣದಲ್ಲಿ ಮಹಾನಾಯಕನ ಹೆಸರು ಜತೆಗೆ ಯುವನಾಯಕನ ಹೆಸರು ಕೇಳಿ ಬರುತ್ತಿರುವ ಬಗ್ಗೆ ಸಚಿವರಿಂದ ನಕಾರ ಉತ್ತರ ಬಂದಿದ್ದು, ಅದೆಲ್ಲಾ ಸುಳ್ಳು ಎಂದರು. ಇನ್ನು, ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನಗಳನ್ನು ಗೆಲ್ಲುತ್ತೇವೆ, ಸಿಡಿಲೇಡಿ ವಿಚಾರ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.