ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ದೇಶದಲ್ಲೇ ಎತ್ತರವಾದ ಕ್ರಿಸ್ಮಸ್ ಟ್ರೀ ಅನಾವರಣ - The Tallest Christmas Tree Unveiling in the Country update
🎬 Watch Now: Feature Video
ಬೆಂಗಳೂರು: ದೇಶದಲ್ಲೇ ಎತ್ತರವಾದದ್ದು ಎನ್ನಲಾದ 75 ಅಡಿಯ ಕ್ರಿಸ್ಮಸ್ ಟ್ರೀಯನ್ನು ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಅನಾವರಣಗೊಳಿಸಲಾಗಿದೆ. ದಿ ವರ್ಲ್ಡ್ ಆಫ್ ಸೀಸನ್ 2ರ ಅಂಗವಾಗಿ ಈ ಟ್ರೀ ನಿರ್ಮಿಸಿದ್ದು ಮಾಲ್‌ಗೆ ಬರುವ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಕ್ರಿಸ್ಮಸ್ ಟ್ರೀ ಅನಾವರಣ ಸಂದರ್ಭದಲ್ಲಿ ಸಾಂತಾಕ್ಲಾಸ್, ಕರೋಲ್ ಗಾಯನ, ಜುಗ್ಲರ್ಸ್ ಹಾಗೂ ಅಂತರಾಷ್ಟ್ರೀಯ ಕಾರ್ನಿವಲ್ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿಯ ಕ್ರಿಸ್ಮಸ್ ಟ್ರೀ ನೋಡಲು ಬೆಂಗಳೂರಿನ ವಿವಿಧೆಡೆಯಿಂದ ಜನರು ಆಗಮಿಸುತ್ತಿರುವುದು ವಿಶೇಷವಾಗಿದೆ.