ವರುಣನಾರ್ಭಟಕ್ಕೆ ಮನೆಗಳು ನೆಲಸಮ.. ಬೀದಿಗೆ ಬಂದ ಬದುಕು - Flood affected ares in Kranataka
🎬 Watch Now: Feature Video
ಉತ್ತರಕನ್ನಡ ಜಿಲ್ಲೆಯಲ್ಲಿ ಮಹಾಮಳೆಗೆ ಜಲಾವೃತಗೊಂಡಿದ್ದ ಮನೆ, ಜಮೀನುಗಳಲ್ಲಿ ಪ್ರವಾಹ ಕಡಿಮೆಯಾಗಿದೆ. ಕದ್ರಾ ಜಲಾಶಯ ವ್ಯಾಪ್ತಿಯಿಂದ 1 ಕಿ.ಮೀ ದೂರದಲ್ಲಿರುವ ಮಲ್ಲಾಪುರ ಆರೇಳು ದಿನಗಳ ಕಾಲ ನೀರಿನಲ್ಲಿ ಮುಳುಗಡೆಯಾಗಿತ್ತು. ಸಂಪೂರ್ಣ ನೆಲಸಮವಾಗಿದ್ದ ಮನೆಗಳತ್ತ ನಿರಾಶ್ರಿತರು ತೆರಳುತ್ತಿದ್ದಾರೆ. ಆದರೆ ಇಲ್ಲಿ ಬಂದ ಜನರಿಗೆ ಕಣ್ಣೀರು ಬಿಟ್ಟು ಬೇರೇನೂ ಬಾರದ ಹಾಗಾಗಿದೆ. ಇಲ್ಲಿನ ಸ್ಥಿತಿಗತಿ ಮತ್ತು ಹಾನಿಗಳ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.