ಕೋಲಾರದಲ್ಲಿ ಮೆರವಣಿಗೆ ಮೂಲಕ ಗಣೇಶನ ಬೃಹತ್ ಮೂರ್ತಿಯ ನಿಮಜ್ಜನ - ಅಖಂಡ ಭಾರತ ವಿನಾಯಕ ಮಹಾಸಭಾ
🎬 Watch Now: Feature Video
ಕೋಲಾರ: ಜಿಲ್ಲೆಯಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ಅದ್ದೂರಿ ಗಣೇಶ ನಿಮಜ್ಜನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ನಗರದ ಎಸ್ಎನ್ಆರ್ ಆಸ್ಪತ್ರೆಯ ಮುಭಾಂಗದಲ್ಲಿ ಕಳೆದ 7 ದಿನಗಳಿಂದ ಪ್ರತಿಷ್ಠಾಪನೆ ಮಾಡಿದ್ದ ಶ್ರೀ ವೆಂಕಟರಮಣಸ್ವಾಮಿ ದೇವರ ರೂಪದ ಗಣೇಶನ ಬೃಹತ್ ಮೂರ್ತಿಯನ್ನು ಮೆರವಣಿಗೆ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿಮಜ್ಜನ ಮಾಡಲಾಯಿತು. ಮೆರವಣಿಗೆಯಲ್ಲಿ ಕಲಾ ತಂಡಗಳ ವಿವಿಧ ನೃತ್ಯಗಳು ಗಮನ ಸೆಳೆದವು.