ಮೈಸೂರು: ಕೊರೊನಾ ಮೃತರ ಅಂತಿಮ ವಿಧಿ ವಿಧಾನದಲ್ಲಿ ಕುಟುಂಬಕ್ಕೂ ಅವಕಾಶ - access to the Coroner death funeral
🎬 Watch Now: Feature Video
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಕೋವಿಡ್ನಿಂದ ಮೃತಪಟ್ಟವರ ಅಂತಿಮ ವಿಧಿವಿಧಾನಗಳನ್ನು ಮಾಡಲು ಸಂಬಂಧಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಪಾಲಿಕೆಯ ಆ್ಯಂಬುಲೆನ್ಸ್ನಲ್ಲಿ ತಂದು ಮುಕ್ತಿಧಾಮದ ಗೇಟ್ ಬಳಿ ಸಂಬಂಧಿಕರಿಗೆ ಹಾಗೂ ಕುಟುಂಬದವರಿಗೆ ಅವರವರ ಧರ್ಮದ ಅನುಸಾರವಾಗಿ ಸುರಕ್ಷತಾ ಕ್ರಮಗಳೊಂದಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಕುಟುಂಬಕ್ಕೂ ನೆಮ್ಮದಿ ತರುವ ಕೆಲಸ ಮಾಡುತ್ತಿದೆ.