ರಿಲ್ಯಾಕ್ಸ್ ಮೂಡ್ನಲ್ಲಿ ಗಜಪಡೆ.. ಆನೆಗಳನ್ನ ನೋಡಲು ಬಂದ ಜನ.. - ಗಜಪಡೆಯತ್ತಾ ಹರಿದು ಬಂದ ಜನಸಾಗರ
🎬 Watch Now: Feature Video
ಮೈಸೂರು:ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿ ರಿಲ್ಯಾಕ್ಸ್ ಮೂಡ್ನಲ್ಲಿರುವ ಗಜಪಡೆಯನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ. ಅರ್ಜುನ ನೇತೃತ್ವದ ಗಜಪಡೆ ಯಶಸ್ವಿಯಾಗಿ ಜಂಬೂಸವಾರಿ ಮುಗಿಸಿದೆ. ಈ ಆನೆಗಳನ್ನು ನೋಡಲು ಇಂದು ಜನಸಾಗರವೇ ಗಜಪಡೆ ತಂಗಿರುವ ಪ್ರದೇಶಗಳಿಗೆ ಬರುತ್ತಿದೆ. ಅರಮನೆ ನೋಡಲು ಬಂದ ಜನ ತಮ್ಮ ಕುಟುಂಬದವರೊಂದಿಗೆ ಬಂದು ಅರ್ಜುನ, ಬಲರಾಮ, ವಿಜಯ, ಧನಂಜಯ, ಈಶ್ವರ,ಅಭಿಮನ್ಯು, ಲಕ್ಷ್ಮಿ, ಕಾವೇರಿ, ಗೋಪಾಲಸ್ವಾಮಿ, ಜಯಪ್ರಕಾಶ ಹಾಗೂ ಗೋಪಿ ಸೇರಿ ಇತರ ಆನೆಗಳನ್ನು ನೋಡಿ ಖುಷಿಪಟ್ಟರು.