2016ರಲ್ಲಿ ನಡೆದಿದ್ದ ಸ್ವಾತಿ ಅತ್ಯಾಚಾರ, ಕೊಲೆ ಪ್ರಕರಣದ ತೀರ್ಪು ನಾಳೆ - chickmagaluru latest news
🎬 Watch Now: Feature Video

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ 2016ರಲ್ಲಿ ನಡೆದಿದ್ದ ಸ್ವಾತಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಜೆಎಮ್ಎಫ್ಸಿ ನ್ಯಾಯಾಲಯ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದು ನಾಳೆ ತೀರ್ಪು ಹೊರಬೀಳಲಿದೆ. 2016ರಲ್ಲಿ ಶೃಂಗೇರಿಯ ಮೆಣಸೆ ಗ್ರಾಮದಲ್ಲಿ ಸ್ವಾತಿ ಎಂಬ ವಿದ್ಯಾರ್ಥಿನಿ ಪರೀಕ್ಷೆಯನ್ನು ಮುಗಿಸಿ ಮನೆಗೆ ತೆರಳುವ ವೇಳೆ ಶೃಂಗೇರಿಯ ಪ್ರದೀಪ್ ಹಾಗೂ ಸಂತೋಷ ಎಂಬ ಇಬ್ಬರೂ ಆರೋಪಿಗಳು ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು. ನಂತರ ಇವರ ಇಬ್ಬರ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆದೇಶವನ್ನು ಚಿಕ್ಕಮಗಳೂರಿನ ಜೆಎಮ್ಎಫ್ಸಿ ನ್ಯಾಯಾಲಯ ನಾಳೆಗೆ ಮುಂದೂಡಿದ್ದು ನಾಳೆ ಈ ಪ್ರಕರಣದ ತೀರ್ಪು ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.