ಅಪಘಾತದಲ್ಲಿ ಹಸ್ತವೇ ತುಂಡು.. 6 ಗಂಟೆ ಸತತ ಚಿಕಿತ್ಸೆ ನಂತರ ಮರು ಜೋಡಣೆ.. - ತುಂಡಾ ಹಸ್ತ
🎬 Watch Now: Feature Video

ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬರ ಬಲಗೈ ಹಸ್ತ ಸಂಪೂರ್ಣ ಕಟ್ ಆಗಿತ್ತು. ಸತತ ಆರು ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಮತ್ತೆ ಮುಂಗೈ ಜೋಡಿಸಿದ್ದಾರೆ. ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ವೈದ್ಯರ ತಂಡ ಗಾಯಾಳು ಹರೀಶ್ಗೆ ಚಿಕಿತ್ಸೆ ನೀಡಿದೆ. ಅಪಘಾತವಾದ ನಂತರ ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಶಸ್ತ್ರಚಿಕಿತ್ಸೆ ಆರಂಭಿಸಿದ ವೈದ್ಯರ ತಂಡ ಸಂಜೆ 5 ಗಂಟೆವರೆಗೂ ಚಿಕಿತ್ಸೆ ಮುಂದುವರಿಸಿತ್ತು. ಇದೀಗ ಗಾಯಾಳು ಹರೀಶ್ ಅವರ ಬಲಗೈ ಹಸ್ತವನ್ನು ಸಂಪೂರ್ಣ ಜೋಡಿಸಲಾಗಿದೆ. ಕೈಬೆರಳುಗಳಿಗೆ ಚಲನಶೀಲತೆ ಬಂದಿದೆ. ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಅನ್ನೋದು ವಿಶೇಷ.
Last Updated : Sep 6, 2019, 6:27 PM IST