ರಾಮನ ಪರಮ ಭಕ್ತೆ ಶಬರಿಗೆ ವಿಶೇಷ ಪೂಜೆ ಸಲ್ಲಿಸಿದ ಕೇಂದ್ರ ಸಚಿವ ಅಂಗಡಿ - ರಾಮನ ಪರಮ ಭಕ್ತೆ ಶಬರಿಗೆ ವಿಶೇಷ ಪೂಜೆ
🎬 Watch Now: Feature Video

ಬೆಳಗಾವಿ: ಇಂದು ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ಭೂಮಿಪೂಜೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಶಬರಿಕೊಳ್ಳದಲ್ಲಿ ಸಂಭ್ರಮ ಮನೆ ಮಾಡಿದೆ. ಶ್ರೀರಾಮನ ಪರಮಭಕ್ತೆ ಶಬರಿ ಶಬರಿಕೊಳ್ಳದಲ್ಲಿ ವಾಸವಿದ್ದರು ಎಂಬ ನಂಬಿಕೆಯಿದೆ. ಅಲ್ಲದೇ ರಾಜ್ಯದಲ್ಲಿರುವ ಏಕೈಕ ಶಬರಿ ದೇವಸ್ಥಾನ ಇದಾಗಿದೆ ಎಂಬುದು ವಿಶೇಷ. ಶ್ರೀರಾಮನ ಪರಮಭಕ್ತೆ ಶಬರಿದೇವಿ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಸಚಿವ ಸುರೇಶ್ ಅಂಗಡಿ ವಿಶೇಷ ಪೂಜೆ ಸಲ್ಲಿಸಿದರು. ಶಬರಿಕೊಳ್ಳದಲ್ಲಿರುವ ಶಬರಿದೇವಿ ದೇವಸ್ಥಾನದಲ್ಲಿ ಸ್ಥಳೀಯರು ಹೋಮಹವನ ನಡೆಸಿದ್ದಾರೆ. ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ, ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಸಚಿವರಿಗೆ ಸಾಥ್ ನೀಡಿದರು. ಹೋಮ ಹವನ ವೇಳೆ ಕಾರ್ಯಕರ್ತರಿಂದ ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.