ಸುಪ್ರೀಂಕೋರ್ಟ್ ತೀರ್ಪು: ಅನರ್ಹ ಶಾಸಕ ಕೆ.ಸಿ ನಾರಾಯಣಗೌಡ ಅಭಿಮಾನಿಗಳಿಂದ ವಿಶೇಷ ಪೂಜೆ - ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು
🎬 Watch Now: Feature Video
ಮಂಡ್ಯ: ಅನರ್ಹರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆ ಕೆ.ಆರ್ ಪೇಟೆ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಅವರ ಅಭಿಮಾನಿಗಳು ತಾಲೂಕಿನ ವಿವಿಧ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೆ.ಆರ್.ಪೇಟೆ ಪಟ್ಟಣದ ಭ್ರಮರಾಂಭ ಶ್ರೀ ಚನ್ನ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಬೆಣ್ಣೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಅಭಿಮಾನಿಗಳು, ಕೋರ್ಟ್ ತೀರ್ಪಿಗೆ ಸ್ವಾಗತ ವ್ಯಕ್ತಪಡಿಸಿದರು.