'ಹೆಂಡತಿ ಬೇಕು'.. ಮೊಬೈಲ್ ಟವರ್ ಏರಿ ವ್ಯಕ್ತಿ ಆತ್ಮಹತ್ಯಾ 'ಡ್ರಾಮಾ'! - ಮೈಸೂರಿನಲ್ಲಿ ಆತ್ಮಹತ್ಯೆ ಡ್ರಾಮಾ
🎬 Watch Now: Feature Video
ಮೈಸೂರು : ಪತ್ನಿ ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದಕ್ಕೆ ಬೇಸರಗೊಂಡ ಗಂಡ ಬಿಎಸ್‌ಎನ್‌ಎಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ನಗರದ ವಿದ್ಯಾರಣ್ಯಪುರದಲ್ಲಿ ನಡೆದಿದೆ. ಗೌರಿ ಶಂಕರ್, ಆತ್ಮಹತ್ಯೆ ಯತ್ನಿಸಿದ ವ್ಯಕ್ತಿಯಾಗಿದ್ದು, ಕೆಲವು ದಿನಗಳ ಹಿಂದೆ ಜಗಳದ ಕಾರಣದಿಂದ ಆತನ ಪತ್ನಿ ಮನೆ ಬಿಟ್ಟು ಹೋಗಿದ್ದಳು. ಹೆಂಡತಿಯನ್ನು ವಾಪಸ್ ಕರೆಸಿ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟವರ್ ಏರಿ ಗೌರಿಶಂಕರ್ ಬೆದರಿಕೆ ಹಾಕಿದ್ದಾನೆ. ಪೊಲೀಸರು ಒಂದೂವರೆ ಗಂಟೆ ಸತತ ಪ್ರಯತ್ನ ನಡೆಸಿ, ಗೌರಿಶಂಕರ್ನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Jan 27, 2021, 8:18 AM IST