ವಾಹನಗಳಿಗೆ ಫಾಸ್ಟ್ಟ್ಯಾಗ್ ಅಳವಡಿಕೆ ಬಗ್ಗೆ ಟೋಲ್ಗಳಲ್ಲಿನ ಸ್ಥಿತಿಗತಿ - ವಾಹನಗಳಿಗೆ ಫಾಸ್ಟ್ಟ್ಯಾಗ್ ಅಳವಡಿಕೆ
🎬 Watch Now: Feature Video

ತುಮಕೂರು: ವಾಹನಗಳಿಗೆ ಫಾಸ್ಟ್ಟ್ಯಾಗ್ ಅಳವಡಿಕೆಗೆ ಸರ್ಕಾರ ನೀಡಿದ್ದ ಗಡುವು ಮುಗಿದು 2 ದಿನಗಳು ಕಳೆಯುತ್ತಾ ಬಂದರೂ, ತುಮಕೂರು ಜಿಲ್ಲೆಯ ಟೋಲ್ ಗೇಟ್ಗಳಲ್ಲಿ ಗೊಂದಲಮಯ ಪರಿಸ್ಥಿತಿ ಮುಂದುವರಿದಿದೆ. ಜಿಲ್ಲೆಯ ಕ್ಯಾಸಂದ್ರ ಟೋಲ್ಗೇಟ್ ಹಾಗೂ ಶಿರಾ ತಾಲೂಕಿನಲ್ಲಿ ಬರುವಂತಹ ಕರಜೀವನಹಳ್ಳಿ ಟೋಲ್ ಗೇಟ್ನಲ್ಲಿ ಲಾರಿ, ಕಾರು ಚಾಲಕರ ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇನ್ನೊಂದೆಡೆ ಫಾಸ್ಟ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಹಣ ನೀಡಬೇಕೆಂದು ಟೋಲ್ ಸಿಬ್ಬಂದಿ ಸೂಚಿಸುತ್ತಿದ್ದಾರೆ. ಈ ಕುರಿತಂತೆ ಟೋಲ್ನಲ್ಲಿ ಇರುವಂತಹ ಸ್ಥಿತಿಗತಿ ಕುರಿತು ಈಟಿವಿ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.