ಹಿಂದೂಗಳಿಗೆ ದತ್ತಪೀಠ ಒಪ್ಪಿಸುವಂತೆ ಆಗ್ರಹ: ಗದಗ ಜಿಲ್ಲಾಡಳಿತದ ಮುಂದೆ ಶ್ರೀರಾಮಸೇನೆ ಧರಣಿ
🎬 Watch Now: Feature Video
ಗದಗ: ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಗದಗ ಜಿಲ್ಲಾಡಳಿತ ಭವನದ ಎದುರು ಶ್ರೀರಾಮಸೇನೆ ಕಾರ್ಯಕರ್ತರು ಧರಣಿ ನಡೆಸಿದರು. ವಿಶ್ವದ ಸಮಸ್ತ ಹಿಂದೂಗಳ ಆರಾಧ್ಯ ದೈವವಾಗಿರುವ ದತ್ತಪೀಠದಲ್ಲಿ ಅನ್ಯ ಧರ್ಮೀಯರು ಗೋರಿಗಳನ್ನು ಅನಧಿಕೃತವಾಗಿ ನಿರ್ಮಿಸಿದ್ದಾರೆ. ಈ ಸಂಗತಿ ಹಿಂದೂಗಳಿಗೆ ಅತ್ಯಂತ ಬೇಸರವನ್ನುಂಟು ಮಾಡಿದೆಯೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ದತ್ತಪೀಠವನ್ನು ಬಾಬಾಬುಡನ್ ಗಿರಿ ಎಂಬಂತೆ ಬಿಂಬಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೂಡಲೇ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿ ಎಮ್. ಜಿ ಹೀರೆಮಠ ಅವರಿಗೆ ಮನವಿ ಸಲ್ಲಿಸಿದರು.