ETV Bharat / state

2024-25 ಸಾಲಿನಲ್ಲಿ ಅಕ್ಟೋಬರ್​ವರೆಗೆ ಪಂಚ ಗ್ಯಾರಂಟಿಗಳಿಗೆ ಬಿಡುಗಡೆಯಾದ ಹಣವೆಷ್ಟು? - FIVE GUARANTEES FUND

ಆರ್ಥಿಕ‌ ಹೊರೆಯ ಮಧ್ಯೆ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಬಜೆಟ್​ನ ಬಹುಪಾಲು ಮೊತ್ತವನ್ನು ಗ್ಯಾರಂಟಿಗೆ ವ್ಯಯಿಸುತ್ತಿದೆ. ಬಜೆಟ್ ನಡೆದು ಏಳು ತಿಂಗಳಾಗಿದ್ದು, ಗ್ಯಾರಂಟಿಗೆ ಈವರೆಗೆ ಬಿಡುಗಡೆಯಾದ ಹಣವೆಷ್ಟು ನೋಡೋಣ.

VIdhana Soudha
ವಿಧಾನಸೌಧ (ETV Bharat)
author img

By ETV Bharat Karnataka Team

Published : Nov 13, 2024, 8:41 AM IST

ಬೆಂಗಳೂರು: ಪಂಚ ಗ್ಯಾರಂಟಿ ಕಾಂಗ್ರೆಸ್ ಸರ್ಕಾರದ ಆದ್ಯತೆಯ ಕಾರ್ಯಕ್ರಮ. ಭಾರೀ ಆರ್ಥಿಕ ಹೊರೆ, ಸೀಮಿತ ಸಂಪನ್ಮೂಲದ ಮಧ್ಯೆ ಗ್ಯಾರಂಟಿಗಳ ಅನುಷ್ಠಾನ ನಡೆಯುತ್ತಿದೆ. ಅಭಿವೃದ್ಧಿಗಳಿಗೆ ಹಣ ಇಲ್ಲ ಎಂದು ಕೈ ಶಾಸಕರ ಪಂಚ ಗ್ಯಾರಂಟಿ ವಿರುದ್ಧದ ಅಪಸ್ವರದ ಮಧ್ಯೆ ಸರ್ಕಾರ ಗ್ಯಾರಂಟಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಹಣ ಪಾವತಿ ವಿಳಂಬ, ಹಣ ಪಾವತಿಯಲ್ಲಿನ ವ್ಯತ್ಯಯಗಳ ಆರೋಪಗಳೊಂದಿಗೆ ಪಂಚ ಗ್ಯಾರಂಟಿ ಜಾರಿಯಾಗುತ್ತಿದೆ. ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಡಿಬಿಟಿ, ಯುವನಿಧಿ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ಸಂಪನ್ಮೂಲ ಹೊಂದಾಣಿಕೆಯೊಂದಿಗೆ ಗ್ಯಾರಂಟಿ ನಿರ್ವಹಣೆಯ ಕಸರತ್ತು ಸಾಗುತ್ತಿದೆ.

ಪಂಚ ಗ್ಯಾರಂಟಿಯನ್ನು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ಪಂಚ ಗ್ಯಾರಂಟಿ ಅನುಷ್ಟಾನದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಶಕ್ತಿ ಯೋಜನೆ ಪರಿಷ್ಕರಣೆ ಹೇಳಿಕೆ, ಬಳಿಕ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗ್ಯಾರಂಟಿ ಪಾಠ ಪಂಚ ಗ್ಯಾರಂಟಿ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ‌. 2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಾಗಿ ಸರ್ಕಾರ ಒಟ್ಟು 52,000 ಕೋಟಿ ರೂ. ಬಜೆಟ್ ಅನುದಾನ ಹಂಚಿಕೆ ಮಾಡಿದೆ. ಕೆಡಿಪಿ ಪ್ರಗತಿ ಅಂಕಿಅಂಶದ ಪ್ರಕಾರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ಒಟ್ಟು 24,407 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸುಮಾರು 24,014 ಕೋಟಿ ರೂ.ನಷ್ಟು ಪಂಚ ಗ್ಯಾರಂಟಿಗಳಿಗೆ ಹಣ ಖರ್ಚು ಮಾಡಲಾಗಿದೆ. ಅಂದರೆ ಅಷ್ಟೂ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿವೆ.

ಶಕ್ತಿ ಯೋಜನೆಗೆ ಎಷ್ಟು ಹಣ ಬಿಡುಗಡೆ?: ಕೆಡಿಪಿ ಪ್ರಗತಿ ಅಂಕಿಅಂಶದಂತೆ ಶಕ್ತಿ ಯೋಜನೆಗೆ 2024-25 ಸಾಲಿನಲ್ಲಿ ಒಟ್ಟು 5,015 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಅಕ್ಟೋಬರ್​ವರೆಗೆ 2,925 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 2,709 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಯೋಜನೆಗೆ 202 ಕೋಟಿ ರೂ. ವೆಚ್ಚವಾಗಿದ್ದರೆ, ಸೆಪ್ಟೆಂಬರ್​ನಲ್ಲಿ 417 ಕೋಟಿ ರೂ. ವೆಚ್ಚವಾಗಿದೆ. ಆಗಸ್ಟ್​ನಲ್ಲಿ ಯೋಜನೆಗೆ 418 ಕೋಟಿ ರೂ. ಖರ್ಚು ಮಾಡಲಾಗಿದೆ. ಜುಲೈನಲ್ಲಿ 418 ಕೋಟಿ ರೂ. ಹಾಗೂ ಜೂನ್​ನಲ್ಲಿ 418 ಕೋಟಿ ರೂ. ವೆಚ್ಚವಾಗಿದೆ. ಮೇ ತಿಂಗಳಲ್ಲಿ ಶಕ್ತಿ ಯೋಜನೆಗಾಗಿ 836 ಕೋಟಿ ರೂ. ವೆಚ್ಚ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಯಾವುದೇ ಹಣ ಫಲಾನುಭವಿಗಳಿಗೆ ಪಾವತಿ ಮಾಡಿರಲಿಲ್ಲ.

ಗೃಹ ಲಕ್ಷ್ಮಿ ಯೋಜನೆಗೆ ಹಣ ಬಿಡುಗಡೆ: ಗೃಹ ಲಕ್ಷ್ಮಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 28,608 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಗೃಹ ಲಕ್ಷ್ಮಿಗೆ ಅಕ್ಟೋಬರ್​ವರೆಗೆ 13,572 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಒಟ್ಟು 13,451 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಅಕ್ಟೋಬರ್ ನಲ್ಲಿ 4, 883 ಕೋಟಿ ರೂ. ವೆಚ್ಚ ಮಾಡಿದ್ದರೆ, ಸೆಪ್ಟೆಂಬರ್ ನಲ್ಲಿ 103 ಕೋಟಿ ರೂ. ಮಾತ್ರ ವೆಚ್ಚವಾಗಿತ್ತು. ಆಗಸ್ಟ್​ನಲ್ಲಿ 2,332 ಕೋಟಿ ರೂ. ಖರ್ಚು ಮಾಡಲಾಗಿದೆ. ಜುಲೈನಲ್ಲಿ ಕೇವಲ 31 ಲಕ್ಷ ರೂ. ಮಾತ್ರ ಹಣ ವೆಚ್ಚ ಮಾಡಲಾಗಿದೆ. ಇನ್ನು ಜೂನ್ ಮತ್ತು ಮೇ ತಿಂಗಳಲ್ಲಿ ಯಾವುದೇ ಹಣ ಪಾವತಿಸಿರಲಿಲ್ಲ. ಏಪ್ರಿಲ್​ನಲ್ಲಿ 6,133 ಕೋಟಿ ರೂ. ಮೊದಲ ಕಂತು ಬಿಡುಗಡೆ ಮಾಡಲಾಗಿತ್ತು ಎಂದು ಕೆಡಿಪಿ ಪ್ರಗತಿ ಅಂಕಿಅಂಶ ತಿಳಿಸಿದೆ.

ಗೃಹ ಜ್ಯೋತಿ ಯೋಜನೆಗೆ ಎಷ್ಟು ಹಣ ಬಿಡುಗಡೆ?: ಗೃಹ ಜ್ಯೋತಿಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 9,657 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಅಕ್ಟೋಬರ್​ವರೆಗೆ ಗೃಹ ಜ್ಯೋತಿ ಯೋಜನೆ 5,164 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 5,164 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅಕ್ಟೋಬರ್​ನಲ್ಲಿ 804 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೆಪ್ಟೆಂಬರ್​ನಲ್ಲಿ 700 ಕೋಟಿ ರೂ., ಆಗಸ್ಟ್​ನಲ್ಲಿ 646 ಕೋಟಿ ರೂ., ಜುಲೈ ತಿಂಗಳಲ್ಲಿ 604 ಕೋಟಿ ರೂ., ಜೂನ್​ನಲ್ಲಿ 804 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೇ ತಿಂಗಳಲ್ಲಿ ಶೂನ್ಯ ವೆಚ್ಚವಾಗಿದ್ದು, ಏಪ್ರಿಲ್​ನಲ್ಲಿ 803 ಕೋಟಿ ರೂ. ವೆಚ್ಚವಾಗಿದೆ.

ಅನ್ನಭಾಗ್ಯ ಡಿಬಿಟಿ ಯೋಜನೆಯ ಸ್ಥಿತಿಗತಿ: ಪ್ರಸಕ್ತ ಸಾಲಿನಲ್ಲಿ ಅನ್ನಭಾಗ್ಯ ಡಿಬಿಟಿ ಯೋಜನೆಗೆ 8,079 ಕೋಟಿ ರೂ. ಹೆಂಚಿಕೆ ಮಾಡಲಾಗಿದೆ. ಅಕ್ಟೋಬರ್​ವರೆಗೆ ಯೋಜನೆಗೆ ಒಟ್ಟು 2,597 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಒಟ್ಟು 2,582 ಕೋಟಿ ರೂ. ಯೋಜನೆಗೆ ಖರ್ಚಾಗಿದೆ. ಆ ಪೈಕಿ ಅಕ್ಟೋಬರ್​ನಲ್ಲಿ ಯೋಜನೆಗೆ 604 ಕೋಟಿ ರೂ. ವೆಚ್ಚವಾಗಿದೆ. ಸೆಪ್ಟೆಂಬರ್​ನಲ್ಲಿ 42.22 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆಗಸ್ಟ್​ನಲ್ಲಿ 311 ಕೋಟಿ ರೂ., ಜುಲೈಯಲ್ಲಿ 939 ಕೋಟಿ ರೂ., ಜೂನ್ ತಿಂಗಳಿನಲ್ಲಿ 666 ಕೋಟಿ ರೂ., ಮೇನಲ್ಲಿ 20 ಕೋಟಿ ರೂ. ಯೋಜನೆಗೆ ಖರ್ಚು ಮಾಡಿದ್ದು, ಏಪ್ರಿಲ್​ನಲ್ಲಿ ಯಾವುದೇ ಹಣ ಖರ್ಚು ಮಾಡಿಲ್ಲ.

ಯುವನಿಧಿ ಯೋಜನೆಗೆ ಹಣ ಬಿಡುಗಡೆ: ಕಡಿಪಿ ಪ್ರಗತಿ ಅಂಕಿಅಂಶದಂತೆ ಪ್ರಸಕ್ತ ವರ್ಷದಲ್ಲಿ ಯುವನಿಧಿ ಯೋಜನೆಗೆ ಒಟ್ಟು 650 ಕೋಟಿ ರೂ. ಹಣ ಹಂಚಿಕೆ ಮಾಡಲಾಗಿದೆ. ಈ ಪೈಕಿ ಅಕ್ಟೋಬರ್​ವರೆಗೆ ಕೇವಲ 149 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಒಟ್ಟು 108 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆ ಪೈಕಿ ಅಕ್ಟೋಬರ್​ನಲ್ಲಿ 27.15 ಕೋಟಿ ರೂ. ವೆಚ್ಚವಾಗಿದೆ. ಸೆಪ್ಟೆಂಬರ್​ನಲ್ಲಿ 26.46 ಕೋಟಿ ರೂ. ವೆಚ್ಚವಾಗಿದೆ. ಆಗಸ್ಟ್​ನಲ್ಲಿ 18 ಕೋಟಿ ರೂ., ಜುಲೈನಲ್ಲಿ 19 ಕೋಟಿ ರೂ., ಜೂನ್​ನಲ್ಲಿ 15 ಕೋಟಿ ರೂ. ಖರ್ಚು ಮಾಡಲಾಗಿದೆ. ಮೇ ತಿಂಗಳಲ್ಲಿ ಫಲಾನುಭವಿಗಳಿಗೆ ಯಾವುದೇ ಹಣ ಪಾವತಿಯಾಗಿಲ್ಲ. ಏಪ್ರಿಲ್​ನಲ್ಲಿ 3.75 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ, ಜಾಗೃತರಾಗಿರುವಂತೆ ದೇವೇಗೌಡರಿಂದ ಸಂದೇಶ: ಡಿ.ಕೆ. ಶಿವಕುಮಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.