ETV Bharat / state

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಶುರು

ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಬೆಳಗ್ಗಿನಿಂದ ಮತದಾನ ಶುರುವಾಗಿದೆ. ಮತಗಟ್ಟೆಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಉಪಚುನಾವಣೆಗೆ ಮತದಾನ
ಉಪಚುನಾವಣೆಗೆ ಮತದಾನ (ETV Bharat)
author img

By ETV Bharat Karnataka Team

Published : Nov 13, 2024, 7:31 AM IST

ರಾಮನಗರ/ಹಾವೇರಿ/ಬಳ್ಳಾರಿ: ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಇಂದು ಬೆಳಗ್ಗಿನಿಂದ ಮತದಾನ ಆರಂಭವಾಗಿದೆ. ಮತದಾರರು ಮತಗಟ್ಟೆಗಳತ್ತ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಮತದಾನಕ್ಕೂ ಮುನ್ನ ಮತಗಟ್ಟೆ ಸಿಬ್ಬಂದಿಯಿಂದ ಅಣಕು ಮತದಾನ ನಡೆಯಿತು. ಮತಯಂತ್ರಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಲಾಯಿತು. ಮತಯಂತ್ರಗಳು ಸರಿ ಇವೆ ಎಂದು ಖಚಿತಪಡಿಸಿಕೊಂಡ ನಂತರವೇ ಸಿಬ್ಬಂದಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಶಾಂತಿಯುತ ಮತದಾನಕ್ಕೆ 3 ಕ್ಷೇತ್ರಗಳಲ್ಲಿ ಆಯಾ ಜಿಲ್ಲಾಡಳಿತಗಳು ಸಕಲ ಸಿದ್ಧತೆಯ ಜೊತೆಗೆ ಸೂಕ್ತ ಬಂದೋಬಸ್ತ್ ಮಾಡಿಕೊಂಡಿವೆ. ಮತಗಟ್ಟೆಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ತಿರುಕಪ್ಪ ಚಾಕಾಪುರ (ETV Bharat)

70 ವರ್ಷದ ವೃದ್ಧನ ಮೊದಲ ಮತ: ಶಿಗ್ಗಾಂವಿಯ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ ನಂ. 1 ರಲ್ಲಿ ಮೊದಲ ಮತಾದಾನ ಮಾಡಿ ಮಾತನಾಡಿದ ಖಾಜೇಖಾರ್ ಓಣಿಯ ತಿರುಕಪ್ಪ ಚಾಕಾಪುರ ಎಂಬ 70 ವರ್ಷದ ವೃದ್ಧ, ಕುರುಬರ ಮೊದಲ ಮತದಾನದಿಂದ ಒಳ್ಳೆಯದಾಗುತ್ತದೆ ಎಂಬ ಮಾತಿದೆ. ಅದೇ ರೀತಿ ನಮ್ಮ ಓಣಿಯ ಹಾಲುಮತದ ಹಿರಿಯರು ಕೂಡ ಮೊದಲು ನೀನೇ ಓಟು ಹಾಕುವಂತೆ ತಿಳಿಸಿದ್ದರು. ಅದರಂತೆ ಪೂಜೆ ಮಾಡಿದ ಬಳಿಕ ನಾನೇ ಮೊದಲ ಓಟು ಹಾಕಿದೆ. ಯುವಕರು, ಯುವತಿಯರು, ಹಿರಿಯರು ಎಲ್ಲರೂ ಮತದಾನ ಮಾಡಬೇಕು. ಅಂದಾಗ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಚನ್ನಪಟ್ಟಣ- ಸಿ.ಪಿ.ಯೋಗೇಶ್ವರ್ vs ನಿಖಿಲ್ ಕುಮಾರಸ್ವಾಮಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್​ನಿಂದ ಸಿ.ಪಿ.ಯೋಗೇಶ್ವರ್ ಮತ್ತು ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳಿದ್ದು, 62 ನಗರ ವ್ಯಾಪ್ತಿ ಹಾಗೂ 214 ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.

ಕ್ಷೇತ್ರದಲ್ಲಿ ಒಟ್ಟು 2,32,949 ಮತದಾರರಿದ್ದು, 1,12,324 ಪುರುಷ ಹಾಗೂ 1,20,617 ಮಹಿಳಾ ಮತದಾರರಿದ್ದಾರೆ. 8 ಜನ ತೃತೀಯ ಲಿಂಗಿಗಳಿದ್ದಾರೆ. 85 ವರ್ಷಕ್ಕೂ ಮೇಲ್ಪಟ್ಟ ಒಟ್ಟು 1,613 ಮತದಾರರಲ್ಲಿ 612 ಪುರುಷರು ಹಾಗೂ 1,001 ಮಹಿಳೆಯರಿದ್ದಾರೆ. 3,011 ಜನ ದಿವ್ಯಾಂಗರಲ್ಲಿ 1,669 ಪುರುಷ ಹಾಗೂ 1,342 ಮಹಿಳಾ ಮತದಾರರಿದ್ದಾರೆ. ಇನ್ನು 8,338 ಯುವ ಮತದಾರರಿದ್ದಾರೆ. ಜೊತೆಗೆ 47 ಸೇವಾ ಮತದಾರರು ಮತಹಕ್ಕು ಹೊಂದಿದ್ದಾರೆ.

ಶಿಗ್ಗಾಂವಿ- ಭರತ್ ಬೊಮ್ಮಾಯಿ vs ಯಾಸೀರ್ ಖಾನ್ ಪಠಾಣ್: ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್​ನಿಂದ ಯಾಸೀರ್ ಖಾನ್ ಪಠಾಣ್ ನಡುವೆ ನೇರ ಹಣಾಹಣಿ ಇದೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- 2,37,525. ಈ ಪೈಕಿ 1,21,443 ಪುರುಷರು ಮತ್ತು 1,16,076 ಮಹಿಳೆಯರು ಹಾಗೂ ಇತರ 6 ಮತದಾರರಿದ್ದಾರೆ. ಒಟ್ಟು 241 ಮತಗಟ್ಟೆಗಳಿದ್ದು, 92 ಸೂಕ್ಷ್ಮ ಮತ್ತು 141 ಸಾಮಾನ್ಯ ಮತಟ್ಟೆಗಳಿವೆ.

ಸಂಡೂರು- ಅನ್ನಪೂರ್ಣ ತುಕಾರಾಂ vs ಬಂಗಾರು ಹನುಮಂತು: ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಅನ್ನಪೂರ್ಣ ತುಕಾರಾಂ ಮತ್ತು ಎನ್​ಡಿಎ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಕಣದಲ್ಲಿದ್ದಾರೆ. ಇಲ್ಲಿ ಒಟ್ಟು 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1,215 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,100 ಮತದಾರರಿದ್ದಾರೆ. ಈ ಪೈಕಿ 1,17,789 ಪುರುಷ ಮತ್ತು 1,18,282 ಮಹಿಳೆ ಹಾಗೂ 29 ತೃತೀಯ ಲಿಂಗಿ ಮತದಾರರು ಇದ್ದಾರೆ.

ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ: ಮತಗಟ್ಟೆ ಸಿಬ್ಬಂದಿಯಿಂದ ಅಣಕು ಮತದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.