ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಊಟಕ್ಕೆ ಆಹ್ವಾನಿಸಿದ ಬಾಲಕಿ: ವಿಡಿಯೋ ವೈರಲ್ - Sri Gavisiddheshwar Mahaswamy invited to dinner by a girl
🎬 Watch Now: Feature Video

ಕೊಪ್ಪಳ: ಸ್ವಾಮೀಜಿ ನಾಳೆ ನಮ್ಮ ಮನೆಗೆ ನೀವು ಊಟಕ್ಕೆ ಬರಬೇಕು ಎಂದು ಬಾಲಕಿವೋರ್ವಳು ಮುದ್ದು ಮಾತುಗಳಿಂದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಆಹ್ವಾನಿಸಿದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ನಿನ್ನೆ ಕೊಪ್ಪಳ ನಗರದ ಖಾಸಗಿ ಹೊಟೇಲ್ವೊಂದರಲ್ಲಿದ್ದ ಕಾರ್ಯಕ್ರಮಕ್ಕೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ತೆರಳುವ ಸಂದರ್ಭದಲ್ಲಿ ಕಾರಿನ ಬಳಿ ಬಂದ ಬಾಲಕಿ "ಅಜ್ಜಾರ ನಾಳೆ ನೀವು ನಮ್ಮ ಮನಿಗೆ ಬರಬೇಕ್ರಿ. ಅಲ್ಲೆ ದರ್ಶನ ತಗೊಳ್ತೇವೆ. ನೀವು ನಮ್ಮ ಮನೆಯಲ್ಲಿ ಊಟ ಮಾಡಬೇಕ್ರಿ ಎಂದು ಆಹ್ವಾನಿಸುತ್ತಾಳೆ". ಮಗುವಿನ ಮುಗ್ಧತೆ ಕಂಡು ಮುಗುಳ್ನಗುತ್ತಾ ಸ್ವಾಮೀಜಿ ಆ ಬಾಲಕಿಗೆ "ದರ್ಶನಾ ತಗೋಳ್ಳೋಕೆ ನೀವು ಮಠಕ್ಕ ಬರ್ಬೇಕೋ ಅಥವಾ ನಾನೇ ನಿಮ್ಮ ಮನೆಗೆ ಬರ್ಬೇಕೋ" ಎಂದು ಕೇಳುತ್ತಾರೆ. ಬಳಿಕ ಆಯ್ತು ಬರ್ತಿನಮ್ಮ ಎನ್ನುತ್ತ ಆಶೀರ್ವಾದ ಮಾಡಿ ಶ್ರೀಗಳು ಮುಂದೆ ತೆರಳಿದ್ದಾರೆ.