ಹಾವನ್ನೇ ಹಿಡಿದು ಎಳೆದೊಯ್ದ ಇಲಿ: ಹಾವು-ಇಲಿ ಕಾದಾಟದ ವಿಡಿಯೋ ವೈರಲ್ - ಹಾವು ಇಲಿ ಕಾದಟ ವಿಡಿಯೋ ವೈರಲ್
🎬 Watch Now: Feature Video
ಕಡಬ: ಸಾಮಾನ್ಯವಾಗಿ ಹಾವುಗಳು ಇಲಿಗಳನ್ನು ಹಿಡಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಪುಟ್ಟ ಇಲಿಯೊಂದು ಹಾವನ್ನೇ ಹಿಡಿದಿದೆ. ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಪುಟ್ಟ ಇಲಿಯೊಂದು ಹಾವಿನೊಂದಿಗೆ ಕಾದಾಡಿ ಕೊನೆಗೆ ಹಾವನ್ನೇ ಹಿಡಿದುಕೊಂಡು ಪೊದೆಯೊಳಗೆ ಹೋಗಿದೆ. ಕಳಾರದ ಗಣೇಶ್ ಎಂಬವರ ದಿನಸಿ ಅಂಗಡಿಯ ಮುಂದೆ ಈ ಘಟನೆ ನಡೆದಿದ್ದು, ಅಲ್ಲಿದ್ದ ಗ್ರಾಹಕ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.