ಶಿರಾ ಉಪಚುನಾವಣೆ:ಹಕ್ಕು ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ - sira by election latest updates
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9411278-thumbnail-3x2-tmkjds.jpg)
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಶಿರಾ ನಗರದ ಮತಗಟ್ಟೆ ಸಂಖ್ಯೆ 171 ರಲ್ಲಿ ಮತಚಲಾವಣೆ ಮಾಡಿದರು. ಶ್ರೀರಂಗನಾಥ ಆಂಗ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಅಳಿಯ ರಮೇಶ್ ಜೊತೆ ಬಂದು ಮತ ಚಲಾಯಿಸಿದ್ರು. ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅಮ್ಮಾಜಮ್ಮ, ತಮ್ಮ ಪತಿ ಸತ್ಯನಾರಾಯಣ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ನಾನು ಮತ ಕೇಳಿದ್ದೇನೆ, ಜನ ಅದಕ್ಕೆ ಸ್ಪಂದಿಸಲಿದ್ದಾರೆ ಎಂದುಕೊಂಡಿದ್ದೇನೆ ಎಂದು ತಿಳಿಸಿದರು.