ಶಿರಾ ಉಪಚುನಾವಣೆ: ದೇವೇಗೌಡರಿಗೆ ನೇಗಿಲು ನೀಡಿ ಗೌರವಿಸಿದ ರೈತರು - ಜೆಡಿಎಸ್ ಅಭ್ಯರ್ಥಿ ಪರ ದೇವೇಗೌಡ ಕ್ಯಾಂಪೇನ್
🎬 Watch Now: Feature Video
ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ರಂಗೇರಿದೆ. ಈಗಾಗಲೇ ಹೆಚ್. ಡಿ ಕುಮಾರಸ್ವಾಮಿಗೆ ಸಾಲಮನ್ನಾ ಫಲಾನುಭವಿಗಳು ಕುರಿಮರಿ, ರಾಗಿ ನೀಡಿ ಗಮನ ಸೆಳೆದಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡರಿಗೆ ಶಿರಾ ತಾಲೂಕಿನ ಸೀಗನಹಳ್ಳಿ ಗ್ರಾಮಸ್ಥರು ನೇಗಿಲು ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಹೆಗಲ ಮೇಲೆ ನೇಗಿಲು ಇರಿಸಿದ ರೈತರು ಹಸಿರು ಶಾಲು ಹೊದಿಸಿ ಸಂತಸ ಪಟ್ಟರು. ಅಲ್ಲದೆ ವಾಲ್ಮೀಕಿ ರಚಿಸಿದ ರಾಮಾಯಣ ಪುಸ್ತಕ ಉಡುಗೊರೆಯಾಗಿ ನೀಡಿದ್ದು ಇಲ್ಲಿ ಗಮನಾರ್ಹವಾಗಿತ್ತು.