ಮಸ್ಕಿಯಲ್ಲಿ ಮಂಗ್ಲಿ ಹವಾ.. ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಮತ ಬೇಟೆ.. ವಿಡಿಯೋ - ಮಸ್ಕಿ ಉಪಚುನಾವಣೆ
🎬 Watch Now: Feature Video

ರಾಯಚೂರು : ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ತೆಲುಗು ಗಾಯಕಿ ಮಂಗ್ಲಿ (ಸತ್ಯವತಿ ರಾಠೋಡ್) ಹಾಡುಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು. ಮೊದಲು ಕ್ಷೇತ್ರದ ವಿವಿಧ ತಾಂಡಾ, ಗ್ರಾಮಗಳಲ್ಲಿ ಮತಬೇಟೆ ನಡೆಸಿ ಮಂಗ್ಲಿ ಸಂಜೆ ಮಸ್ಕಿ ಪಟ್ಟಣದಲ್ಲಿ ಪ್ರಚಾರ ನಡೆಸಿದರು. ತೆಲುಗು, ಕನ್ನಡ ಹಾಡುಗಳನ್ನು ಹಾಡುವ ಮೂಲಕ ಪ್ರತಾಪ್ ಗೌಡ ಪಾಟೀಲ್ಗೆ ಮತ ಹಾಕುವಂತೆ ಮನವಿ ಮಾಡಿದರು. ಮಂಗ್ಲಿ ನೋಡಲು ಎಲ್ಲಾ ಕಡೆಗಳಲ್ಲೂ ಸಾವಿರಾರು ಜನ ಸೇರಿದ್ದರು.