ಕೊರೊನಾ ಕರಿಛಾಯೆ: ಸರಳ ದಸರಾಕ್ಕೆ ಸಾಕ್ಷಿಯಾದ ಹೇಮಗುಡ್ಡ - ಸರಳ ದಸರಾ ಹೇಮಗುಡ್ಡ
🎬 Watch Now: Feature Video
ಗಂಗಾವತಿ: ಕೊರೊನಾ ಹಿನ್ನೆಲೆ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸರಳ ದಸರಾ ಆಚರಣೆ ಮಾಡಲಾಯಿತು. ಪ್ರತಿವರ್ಷ ಜಂಬೂಸವಾರಿ ನಡೆಸುವ ಮೂಲಕ ಮೈಸೂರು ದಸರಾ ಮಾದರಿಯನ್ನು ಅನುಸರಿಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲೆಡೆ ಸರಳ ದಸರಾ ಆಚರಣೆ ಮಾಡುತ್ತಿರುವ ಹಿನ್ನೆಲೆ, ಹೇಮಗುಡ್ಡದಲ್ಲಿಯೂ ಸಹ ಸರಳತೆಗೆ ಆದ್ಯತೆ ನೀಡಲಾಗಿತ್ತು. ಜಂಬೂಸವಾರಿ ಬದಲಿಗೆ ಈ ಬಾರಿ ವಾಹನದಲ್ಲಿ ಅಮ್ಮನವರನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು. ಮಾಜಿ ಸಂಸದ ಹೆಚ್.ಜಿ. ರಾಮುಲು ಪೂಜೆ ಸಲ್ಲಿಸಿ ತೆಂಗಿನ ಕಾಯಿ ಸಮರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ದೇಗುಲದಿಂದ ಪಾದಗಟ್ಟೆಯವರೆಗೆ ತೆರಳಿದ ದೇವಿಯ ಸವಾರಿ, ಪುನಃ ದೇಗುಲಕ್ಕೆ ಆಗಮಿಸುವ ಮೂಲಕ ಮೆರವಣಿಗೆಯನ್ನು ಸಂಪನ್ನಗೊಳಿಸಲಾಯಿತು.