ಕೇರೂರಿನಲ್ಲಿ ಅರಣ್ಯ ಸಿದ್ದೇಶ್ವರ ಜಾತ್ರೆ: ಭಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ - ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರ ಸಂಭ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6304943-thumbnail-3x2-sanju.jpg)
ಚಿಕ್ಕೋಡಿ ತಾಲೂಕಿನ ಕೇರೂರಿನ ಅರಣ್ಯ ಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಂಡಾರದಲ್ಲಿ ಮಿಂದೆದ್ದು, ಭಕ್ತಿ ಭಾವದ ಪರಾಕಾಷ್ಠೆ ಮೆರೆದರು. ಪ್ರಪಂಚದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ, ಸಕಲ ಜನಸ್ತೋಮಕ್ಕೆ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಶಾಂತಿ ನೆಲೆಸಲಿ. ಅಧರ್ಮ ನಾಶವಾಗಿ ಧರ್ಮವು ತಲೆ ಎತ್ತಿ ನಿಲ್ಲಲಿ ಎನ್ನುವ ಹತ್ತು ಹಲವಾರು ಕಾರಣಗಳಿಂದ ವಂಶಪರಂಪರೆಯಾಗಿ ಈ ಜಾತ್ರೆಯಲ್ಲಿ ಭಂಡಾರದ ಉತ್ಸವವನ್ನು ಆಚರಿಸಲಾಗುತ್ತೆ.ಈ ಉತ್ಸವದಲ್ಲಿ ಗ್ರಾಮದ ಸ್ತ್ರೀ, ಪುರುಷ ಎನ್ನದೇ ಪ್ರತಿಯೊಬ್ಬರು ಪಾಲ್ಗೊಳ್ಳುವುದು ವಿಶೇಷವಾಗಿದೆ.