ಶ್ರೀನಗರ (ಜಮ್ಮು) : ಭಯೋತ್ಪಾದಕ ಗುಂಪಿನೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಮೂವರು ಸರ್ಕಾರಿ ಉದ್ಯೋಗಿಗಳನ್ನು ವಜಾ ಮಾಡಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ನೌಕರರಲ್ಲಿ ಒಬ್ಬರು ಪೊಲೀಸ್ ಕಾನ್ಸ್ಟೇಬಲ್, ಮತ್ತೊಬ್ಬರು ಶಿಕ್ಷಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯಾಗಿದ್ದಾರೆ. ಇವರು 2000 ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸಚಿವರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಈ ಹಿಂದೆ ಬಂಧಿತರಾಗಿದ್ದರು ಎಂದು ತಿಳಿಸಿದ್ದಾರೆ.
ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳ ತನಿಖೆಯ ನಂತರ ಮೂವರ ವಿರುದ್ಧ ಭಯೋತ್ಪಾದಕ ಸಂಬಂಧಗಳು ವರದಿಯಾದ ಬಳಿಕ ಸಂವಿಧಾನದ 311 (2) (c) ಅನ್ವಯ ವಜಾ ಪ್ರಕ್ರಿಯೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಲ್ಲಿ 70ಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ಎಲ್‌ಜಿ ವಜಾಗೊಳಿಸಿದ್ದಾರೆ. ವಜಾಕ್ಕೂ ಮುನ್ನ ಎಲ್‌ಜಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭದ್ರತಾ ಸಭೆಗಳನ್ನು ನಡೆಸಿದ್ದರು.
ವಜಾಗೊಂಡಿರುವ ಪೊಲೀಸ್ ಕಾನ್ಸ್ಟೇಬಲ್ 2005ರ ಆರಂಭದಲ್ಲಿ ವಿಶೇಷ ಪೊಲೀಸ್ ಅಧಿಕಾರಿಯಾಗಿ (ಎಸ್‌ಪಿಒ) ನೇಮಿಸಲಾಗಿತ್ತು ಮತ್ತು ನಂತರ 2011 ರಲ್ಲಿ ಕಾನ್ಸ್ಟೇಬಲ್ ಆಗಿ ಬಡ್ತಿ ನೀಡಲಾಯಿತು. ಆತನನ್ನು ಕಳೆದ ಮೇ ಅಲ್ಲಿ ಕೂಡ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಚಂದ್ರಬಾಬು, ನಿತೀಶ್, ಮುಸ್ಲಿಮ್ ಸಂಸದರಿಂದ ಬೆಂಬಲ : ಕೇಂದ್ರ ಸರ್ಕಾರ
ಇದನ್ನೂ ಓದಿ: ಬೆಂಗಳೂರು ವಕೀಲರ ಸಂಘದಲ್ಲಿ ಎಸ್ಸಿ-ಎಸ್ಟಿ, ಒಬಿಸಿ ಮೀಸಲಾತಿ ವಿಚಾರ: ಸುದೀರ್ಘ ವಿಚಾರಣೆಯ ಅಗತ್ಯವಿದೆ ಎಂದ ಸುಪ್ರೀಂ