ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್ ಗೆಲುವಿಗೆ ಸಿದ್ದರಾಮಯ್ಯ ರಣತಂತ್ರ..! - congress by election campaign update
🎬 Watch Now: Feature Video
ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಳೆದೆರೆಡು ದಿನಗಳಿಂದ ಕ್ಷೇತ್ರಕ್ಕೆ ರಾಜಕೀಯ ನಾಯಕರು ಲಗ್ಗೆ ಇಡುತ್ತಿರೋ ಸಂಖ್ಯೆ ಕೂಡ ಬೆಳದಿದೆ. ಒಂದು ಕಡೆ ತಮ್ಮ ಕೊನೆಯ ಚುನಾವಣೆ ಅಂತಾ ಹೇಳೋ ಮೂಲಕ ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರನ್ನು ಗೆಲ್ಲಿಸಲು ರಣತಂತ್ರ ರೂಪಿಸಿರುವ ಕೈ ನಾಯಕರು ಕ್ಷೇತ್ರಕ್ಕೆ ಲಗ್ಗೆ ಹಾಕುವ ಮೂಲಕ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದಾರೆ.