ಶಿವಮೊಗ್ಗ : ಬಲೆಗೆ ಸಿಲುಕಿ ಒದ್ದಾಡುತ್ತಿದ್ದ 8 ಅಡಿ ಉದ್ದದ ಹೆಬ್ಬಾವು ರಕ್ಷಣೆ.. - shimogga leatest news
🎬 Watch Now: Feature Video
ಭತ್ತದ ಗದ್ದೆಯಲ್ಲಿ ಹಾಕಿದ್ದ ಬಲೆಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಶಿವಮೊಗ್ಗ ತಾಲೂಕು ಹಾಳೂರು ಅನುಪಿನಕಟ್ಟೆ ಗ್ರಾಮದ ನಾಜಿರ್ ಅಹ್ಮದ್ ಅವರ ಭತ್ತದ ಗದ್ದೆಯಲ್ಲಿ ಹಾಕಿದ್ದ ಬಲೆಗೆ ಹೆಬ್ಬಾವೊಂದು ಸಿಲುಕಿ ಒದ್ದಾಡುತ್ತಿತ್ತು. ಈ ವಿಚಾರ ತಿಳಿದ ಸ್ನೇಕ್ ಕಿರಣ್ ಸ್ಥಳಕ್ಕೆ ತೆರಳಿ ಹೆಬ್ಬಾವನ್ನು ಬಲೆಯಿಂದ ಬಿಡಿಸಿದ್ದಾರೆ.