ಹೊಸಕೋಟೆಯ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡುವುದು ನನ್ನ ಕರ್ತವ್ಯ: ಶರತ್ ಬಚ್ಚೇಗೌಡ - ಶರತ್ ಬಚ್ಚೇಗೌಡ ಸುದ್ದಿ
🎬 Watch Now: Feature Video
ಸರ್ಕಾರಿ ವೈದ್ಯಾಧಿಕಾರಿ ಮಂಜುನಾಥ್ಗೆ ಧಮ್ಕಿ ಹಾಕಿದ ಪ್ರಕರಣದ ಬಗ್ಗೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳ ಪರ ನಾನು ಶಾಸಕನಾಗಿ ನಿಲ್ಲುತ್ತೇನೆ. ಡಿಎಚ್ಒ ಮಂಜುನಾಥ್ ಒಬ್ಬ ಒಳ್ಳೆ ಅಧಿಕಾರಿ, ಹೊಸಕೋಟೆಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ಬೆಂಬಲಿಗರ ಮೇಲೆ ಆರೋಪ ಮಾಡಿದರೆ ಸಾಕ್ಷಿ ಸಮೇತ ತಿಳಿಸಿ ಎಂದರು. ರಾಜಕೀಯಕ್ಕೋಸ್ಕರ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನನ್ನ ಮೇಲೆ ಏನೇ ಆರೋಪ ಮಾಡಿದರೂ ಅದಕ್ಕೆ ಸಂಬಂಧಿಸಿದ ಸಾಕ್ಷಿ ತೋರಿಸಲಿ ಎಂದರು. ಟಿಎಚ್ಒ ಮಂಜುನಾಥ್ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಐ ಜಿ ಪಿ ಅವರನ್ನ ಭೇಟಿ ಮಾಡಿ ಮಾತನಾಡುತ್ತೇನೆ ಎಂದರು. ರಾಜೀನಾಮೆ ವಿಚಾರದಲ್ಲಿ ನಾನು ಖುದ್ದಾಗಿ ಮಂಜುನಾಥ್ ಅವರ ಬಳಿ ಮಾತನಾಡಿದ್ದೇನೆ ಯಾವುದೇ ಕಾರಣಕ್ಕೂ ನೀವು ಕೆಲಸ ತೊರೆಯಬಾರದು ಎಂದು ತಿಳಿಸಿದ್ದೆನೆ ಅವರು ರಾಜಿನಾಮೆ ನೀಡಲ್ಲ ಎಂದರು.