ಮಾಸ್ಕ್ ಹಾಕಿಕೊಳ್ಳುವಂತೆ ಸಚಿವ ಕೆ.ಎಸ್.ಈಶ್ವರಪ್ಪಗೆ ಭದ್ರತಾ ಸಿಬ್ಬಂದಿ ಮನವಿ-VIDEO - ಚಾಮುಂಡೇಶ್ವರಿ ದರ್ಶನ ಪಡೆದ ಸಚಿವ ಕೆ.ಎಸ್.ಈಶ್ವರಪ್ಪ
🎬 Watch Now: Feature Video
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆಯಲು ಆಗಮಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ದೇವಸ್ಥಾನದ ಬಾಗಿಲಿನಲ್ಲಿಯೇ ಮಾಸ್ಕ್ ಹಾಕಿಕೊಳ್ಳುವಂತೆ ಭದ್ರತಾ ಸಿಬಂದಿ ಮನವಿ ಮಾಡಿದರು. ಚಾಮುಂಡಿ ತಾಯಿಯ ದರ್ಶನ ಪಡೆಯಲು ಕುಟುಂಬ ಸಮೇತ ಆಗಮಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಮಾಸ್ಕ್ ಧರಿಸದೇ, ದೇವಸ್ಥಾನದ ಒಳಗೆ ಬರಲು ಮುಂದಾದರು. ಆ ವೇಳೆ ಭದ್ರತಾ ಸಿಬ್ಬಂದಿ 'ಸರ್ ಸರ್, ಮಾಸ್ಕ್ ಹಾಕಿಕೊಳ್ಳಿ' ಎಂದು ಹೇಳುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ತಕ್ಷಣ ಈಶ್ವರಪ್ಪ ತಮ್ಮ ಸಹಾಯಕರಿಂದ ಮಾಸ್ಕ್ ಪಡೆದು ಹಾಕಿಕೊಂಡು ದೇವಸ್ಥಾನದ ಒಳಗೆ ಹೋದರು.