ಬೇರೆ ನಗರಗಳಿಂದ ಬಂದ 150ಕ್ಕೂ ಹೆಚ್ಚು ಮಂದಿಗೆ ಸ್ಕ್ರೀನಿಂಗ್.. - ಸ್ಕ್ರೀನಿಂಗ್
🎬 Watch Now: Feature Video
ಗಂಗಾವತಿ : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆಯಿಂದ ನಗರಕ್ಕೆ ಆಗಮಿಸಿರುವ 150ಕ್ಕೂ ಹೆಚ್ಚು ಜನರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ರೀನಿಂಗ್ ನಡೆಸಲಾಗಿದೆ. ಸ್ಕ್ರೀನಿಂಗ್ನಲ್ಲಿ ಯಾರೊಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ತಾಲೂಕಿನ ನಾನಾ ಗ್ರಾಮಗಳಿಂದ ಕೆಲಸ ಅರಸಿ ದೂರದ ಬೆಂಗಳೂರು, ಬಿಜಾಪುರ, ಕಲಬುರ್ಗಿ, ಬಾಗಲಕೋಟೆಯಂತ ನಗರಕ್ಕೆ ತೆರಳಿದ್ದರು. ಇದೀಗ ಎಲ್ಲರನ್ನೂ ಸುರಕ್ಷಿತವಾಗಿ ಅವರವರ ಊರಿಗೆ ಕಳುಹಿಸಲಾಗಿದೆ.