'ನಮ್ಮ ಶಾಲೆ, ಮಕ್ಕಳ ಸುರಕ್ಷಿತ ಕೇಂದ್ರ'.. ಮತ್ತೆ ಬನ್ನಿ ಕೂಡಿ ಕಲಿಯೋಣ.. - ಶಾಲಾ-ಕಾಲೇಜ್ ಆರಂಭ
🎬 Watch Now: Feature Video
ತುಮಕೂರು ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ತರಗತಿಗಳು ಆರಂಭವಾಗಿವೆ. ಶಾಲಾ-ಕಾಲೇಜುಗಳಲ್ಲಿ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗಿದೆ. ಶಾಲೆಗಳ ಬಳಿ ತಳಿರು, ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿದೆ. ಕೊರೊನಾ ಕುರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಪೋಸ್ಟರ್‌ಗಳನ್ನು ಶಾಲೆಗಳು ಹಾಗೂ ಕಾಲೇಜಿನ ಬಳಿ ಅಳವಡಿಸಲಾಗಿದೆ. ಕಾಲೇಜು ಹಾಗೂ ಶಾಲೆಗಳ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮತ್ತು ಪಾಠ ಹೇಳುವಂತಹ ವ್ಯವಸ್ಥೆ ಮಾಡಲಾಗಿದೆ.