ತಮಿಳುನಾಡಿನ ಕೃಷ್ಣಗಿರಿಯಲ್ಲಿ ಶಾಲಾ ಬಸ್ ಅಪಘಾತ: ಇಬ್ಬರು ಮಕ್ಕಳಿಗೆ ಗಾಯ - ಅಪಘಾತಕ್ಕೀಡಾದ ಶಾಲಾ ಬಸ್ ತಮಿಳುನಾಡು
🎬 Watch Now: Feature Video
ತಮಿಳುನಾಡು/ಕೃಷ್ಣಗಿರಿ: ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಇಳಿದ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉದ್ದನಪಲ್ಲಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಘಟನೆ ನಡೆದಿದೆ. ರಾಯಕೋಟ-ಬೀರ್ಜಿಯಾಪಲ್ಲಿ ರಸ್ತೆಯಲ್ಲಿ ತೆರಳುತ್ತಿದ್ದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡ ಹೊಸೂರು ತಾಲೂಕಿನ ವಿಜಯಾ ವಿದ್ಯಾಲಯದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.