ಕೊರೊನಾ ಸೋಂಕಿಗೆ ಸ್ವಯಂ ಜಾಗೃತಿ ಮೂಡಿಸಿಕೊಳ್ಳಿ: ಖಂಡ್ರೆ - ಕೊರೊನಾ ಜಾಗೃತಿ ಮೂಡಿಸಿದ ರಾಜಕೀಯ ನಾಯಕರು
🎬 Watch Now: Feature Video

ಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಜನ ಸ್ವಯಂ ಜಾಗೃತಿ ಮೂಡಿಸಿಕೊಳ್ಳಬೇಕು. ಸರ್ಕಾರ ಆದೇಶಿಸುವ ಸೂಚನೆಗಳನ್ನು ಪಾಲಿಸಿ, ನಮ್ಮ ಕುಟುಂಬ ಹಾಗೂ ಸಮೂಹವನ್ನು ಕಾಪಾಡಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಲಕ್ಷಾಂತರ ಜನರು ಸೋಂಕಿನಿಂದ ನರಳುತ್ತಿದ್ದಾರೆ. ಸಾವಿರಾರು ಜನರು ಪ್ರಾಣಬಿಟ್ಟಿದ್ದಾರೆ. ಈ ಸಾಂಕ್ರಾಮಿಕ ತಡೆಗೆ ನಾವೆಲ್ಲ ಸಾಮೂಹಿಕ ಅಂತರ ಕಾಯ್ದುಕೊಳ್ಳಲೇ ಬೇಕಿದೆ ಎಂದು ಸೂಚಿಸಿದರು.