ಬಂತು ಬೂಮ್ ಸ್ಪೇಯರ್ ಯಂತ್ರ... ಈಗ ಸ್ಯಾನಿಟೈಸರ್​​ ಸಿಂಪಡಣೆ ಮತ್ತಷ್ಟು ಸುಲಭ - ಸ್ಯಾನಿಟೈಜರ್​​ ಸಿಂಪಡಣೆ

🎬 Watch Now: Feature Video

thumbnail

By

Published : Apr 24, 2020, 3:37 PM IST

Updated : Apr 24, 2020, 4:02 PM IST

ಬಾಗಲಕೋಟೆಯ ರೆಡ್ ಜೋನ್​​ ಪ್ರದೇಶದಲ್ಲಿ ನೂತನ ಯಂತ್ರದ ಮೂಲಕ ಸ್ಯಾನಿಟೈಸರ್​​ ಸಿಂಪಡಣೆ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ. ಬೂಮ್ ಸ್ಪೇಯರ್ ಯಂತ್ರದಿಂದ ನಿಷೇಧಿತ ಪ್ರದೇಶಕ್ಕೆ ಔಷಧ ಹಾಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತದೆ. ಟ್ರ್ಯಾಕ್ಟರ್​​ ಮಾದರಿಯಲ್ಲಿ ಇರುವ ಈ ಯಂತ್ರ ಚಾಲಕನ ಸಹಾಯದಿಂದ ಸಂಚಾರ ಮಾಡುತ್ತಾ, ಇಡೀ ಪ್ರದೇಶದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತದೆ. ಒಬ್ಬ ಸಿಬ್ಬಂದಿಯಿಂದ ಇಡೀ ನಗರಕ್ಕೆ ಕೆಲವೇ ಸಮಯದಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತದೆ. ಸುಮಾರು 13 ಲಕ್ಷ ವೆಚ್ಚದ ಈ ಯಂತ್ರವು ಬಳ್ಳಾರಿ ಜಿಲ್ಲೆಯಿಂದ ತಾತ್ಕಾಲಿಕವಾಗಿ ಬಾಗಲಕೋಟೆ ಜಿಲ್ಲಾಡಳಿತ ತರಿಸಿಕೊಂಡಿದೆ. ನಗರ ಸಭೆಯಿಂದ ಸಿಂಪಡಣೆ ಕಾರ್ಯ ನಡೆಯುತ್ತಿದ್ದು, ಸ್ಥಳೀಯ ಶಾಸಕರಾದ ವೀರಣ್ಣ ಚರಂತಿಮಠ ಚಾಲನೆ ನೀಡಿದರು.
Last Updated : Apr 24, 2020, 4:02 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.