ಜೋಳಿಗೆ ಹಿಡಿದು ಕನ್ನಡ ಪುಸ್ತಕ ಮಾರಾಟ ಮಾಡಿದ ಕಂದಾಯ ಸಚಿವರು - Devanahalli ನೆಡಸ
🎬 Watch Now: Feature Video
ದೇವನಹಳ್ಳಿ : ಪಟ್ಟಣದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರು, ನಂತರ ಪುಸ್ತಕ ಮಾರಾಟದ ಜೋಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜೋಳಿಗೆಯಲ್ಲಿ ಕನ್ನಡ ಪುಸ್ತಕ ತಗೊಂಡು ಹೊರಟ ಸಚಿವರು ದೇವನಹಳ್ಳಿ ಪಟ್ಟಣದ ಬಸ್ ನಿಲ್ದಾಣದ ಬಳಿಯ ಅಂಗಡಿಗಳಿಗೆ ಹೋಗಿ ಮಾರಾಟ ಮಾಡಿದರು. ಸಾರ್ವಜನಿಕರಿಗೆ ಪುಸ್ತಕ ಮಾರಾಟ ಮಾಡಿದಲ್ಲಿದೆ ಪುಸ್ತಕ ಖರೀದಿಸಿದವರಿಗೆ ಓದುವಂತೆ ಮನವಿ ಮಾಡಿದರು. ಸಚಿವರ ಜೊತೆ ಅಧಿಕಾರಿಗಳು ಸಹ ಭಾಗವಹಿಸಿದರು.