ಕೊಯ್ನಾದಿಂದ ಕೃಷ್ಣಾ ನದಿಗೆ ನೀರು; ನಿಡಗುಂದಿ-ಬಳಬಟ್ಟಿ ಗ್ರಾಮದಲ್ಲಿ ಕಬ್ಬು ಬೆಳೆ ಜಲಾವೃತ - Vijayapura news
🎬 Watch Now: Feature Video
ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕಾಶಿನಕುಂಟಿಯಲ್ಲಿ 80 ಎಕರೆ, ಬೂದಿಹಾಳದ ಗ್ರಾಮದಲ್ಲಿ 70 ಎಕರೆ ಹಾಗೂ ಬಳಬಟ್ಟಿ ಗ್ರಾಮದ 40 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು ಜಲಾವೃತವಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಡಂಗೂರ ಸಾರಿದೆ. ಯಾವುದೇ ಸಮಯದಲ್ಲಿ ಇನ್ನಷ್ಟು ನೀರು ಹರಿಸುವ ಸಾಧ್ಯತೆ ಹಿನ್ನೆಲೆ. ನದಿಗೆ ಇಳಿಯದಂತೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.