'ಮೈಸೂರು ಗಾಂಧಿ'ಗೆ ಏಕಿಲ್ಲ ಸ್ಮಾರಕ ಭಾಗ್ಯ? - ಮೈಸೂರು ಸುದ್ದಿ
🎬 Watch Now: Feature Video
ಮಹಾತ್ಮ ಗಾಂಧೀಜಿ ಜೊತೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ತನ್ನದೇ ಛಾಪು ಮೂಡಿಸಿದವರು'ಮೈಸೂರುಗಾಂಧಿ' ಎಂದೇ ಪ್ರಸಿದ್ಧಿ ಪಡೆದ ತಗಡೂರು ರಾಮಚಂದ್ರರಾವ್. ಇವರು ಖಾದಿ ಗ್ರಾಮೋದ್ಯೋಗ ಸ್ಥಾಪಿಸಿ, ಸ್ವದೇಶಿ ಮಂತ್ರ ಪಠಿಸಿದ್ದರು. ಸ್ವಾತಂತ್ರ್ಯ, ಸ್ವದೇಶಿ ಪರಿಕಲ್ಪನೆಯನ್ನೇ ಉಸಿರಾಡಿ ದೇಶಕ್ಕೆ ಜೀವ ಮುಡಿಪಿಟ್ಟ ಈ ಚೇತನ ಜನಿಸಿದ ಮನೆಯನ್ನು ಸ್ಮಾರಕ ಮಾಡಬೇಕೆಂದು ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗ್ತಿದೆ. ಆದರೆ, ಸ್ಮಾರಕ ಮಾತ್ರ ಮರೀಚಿಕೆಯಾಗಿದೆ.