ಕೊಪ್ಪಳ ಜಿಲ್ಲಾದ್ಯಂತ ಬಿಟ್ಟೂಬಿಡದೇ ಸುರಿಯುತ್ತಿರುವ ಸೋನೆ ಮಳೆ - ಕೊಪ್ಪಳದಲ್ಲಿ ಮಳೆ
🎬 Watch Now: Feature Video
ಕೊಪ್ಪಳ ನಗರ ಸೇರಿದಂತೆ ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದ ಎಡೆಬಿಡದೇ ಸೋನೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನರು ಮನೆಯಿಂದ ಹೊರ ಹೋಗಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಸಂಜೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಇಂದು ಬೆಳಗ್ಗೆಯಿಂದ ಸೋನೆ ಮಳೆ ನಿರಂತರವಾಗಿ ಸುರಿಯುತ್ತಿದೆ. ಮೋಡ ಕವಿದ ವಾತಾವರಣ ಹಾಗೂ ಸೋನೆ ಮಳೆಯಿಂದಾಗಿ ಮಲೆನಾಡ ವಾತವರಣ ನಿರ್ಮಾಣವಾಗಿದೆ. ಇನ್ನು ಜಿಟಿಜಿಟಿ ಮಳೆಯಲ್ಲಿಯೇ ಗವಿಮಠದ ರಸ್ತೆಯಲ್ಲಿ ಹೋಗುತ್ತಿದ್ದ ಜಾನುವಾರುಗಳ ಹಿಂಡು ಗಮನ ಸೆಳೆಯಿತು.