ಹುಬ್ಬಳ್ಳಿಯಲ್ಲಿ ಬಿಸಿಲು ಮಳೆ: ಆತಂಕದಲ್ಲಿ ರೈತ..! - rain in hubl
🎬 Watch Now: Feature Video

ಹುಬ್ಬಳ್ಳಿ: ಸುಡು ಬಿಸಿಲಿನಲ್ಲಿದ್ದ ಜನರಿಗೆ ವರುಣ ಕೃಪೆ ತೋರಿದ್ದಾನೆ. ಮಳೆ ಬಿದ್ದಿದ್ದರಿಂದ ಕುದಿ ಬಿಂದುವಾಗಿದ್ದ ಭೂಮಿ ತುಸು ತಣಿದಿದೆ. ನಗರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಸಿಲು ಸಮೇತ ಮಳೆ ಆಗಮಸಿದ ಹಿನ್ನೆಲೆಯಲ್ಲಿ ರೈತನಲ್ಲಿ ಆತಂಕ ಮನೆ ಮಾಡಿದೆ. ಮೊದಲೇ ಹೊಲಗಳಲ್ಲಿ ಕಟಾವಿಗೆ ಬಂದಿರುವ ಜೋಳವಿದ್ದು, ಈ ವೇಳೆ ಮಳೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಭೂಮಿ ಮಳೆಯಿಂದ ತಂಪಾಗಿದ್ದು, ಶಕೆಗೆ ಬೇಸತ್ತಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ. ನಿನ್ನೆಯಿಂದ ಸುರಿಯುತ್ತಿರುವ ಮಳೆರಾಯ ಗಾಳಿ ಸಮೇತ ಆಗಮಿಸಿದ್ದಾನೆ. ಇನ್ನೂ ಮುಂಚಿತವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತನಲ್ಲಿ ಆತಂಕ ಮನೆ ಮಾಡಿದೆ.
Last Updated : Mar 26, 2020, 7:38 AM IST