'ಮಹಾ'ಮಳೆಗೆ ಚಿಕ್ಕೋಡಿ ಉಪವಿಭಾಗದ ಜನಜೀವನ ತತ್ತರ - Krishna River
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8327023-thumbnail-3x2-vish.jpg)
ಬೆಳಗಾವಿ/ ಚಿಕ್ಕೋಡಿ: ಚಿಕ್ಕೋಡಿಯ ದೂಧಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ರಾತ್ರೋರಾತ್ರಿ ನೀರಿನ ಹರವಿನಲ್ಲಿ ಹೆಚ್ಚಳವಾಗಿ ವೇದಗಂಗಾ ನದಿ ನೀರು ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮಕ್ಕೆ ನುಗ್ಗಿದೆ. ಸಾವಿರಾರು ಎಕರೆ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿದ್ದು,ಗ್ರಾಮದ ಜನರು ಆತಂಕದಲ್ಲಿದ್ದಾರೆ. ರಾತ್ರೋರಾತ್ರಿ ಗ್ರಾಮ ಖಾಲಿ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಜಿಲ್ಲಾಡಳಿತದ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.