ಅಪ್ಪನ ಹಾಡು ಹಾಡಿದ ಅಪ್ಪು: ವರನಟನಿಗೆ ಯುವರತ್ನನ ಗಿಪ್ಟ್- ವಿಡಿಯೋ - ರಾಧಾಕೃಷ್ಣ ರೆಡ್ಡಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6921762-thumbnail-3x2-raj.jpg)
ಕನ್ನಡ ಚಿತ್ರರಂಗದ ಆರಾಧ್ಯ ಧೈವ ವರನಟ ಡಾ. ರಾಜ್ಕುಮಾರ್ ಅವರ 92ನೇ ವರ್ಷದ ಹುಟ್ಟು ಹಬ್ಬವನ್ನು ಕನ್ನಡಿಗರು ಹಬ್ಬದ ರೀತಿಯಲ್ಲಿ ಆಚರಿಸುತ್ತಾ ಬಂದಿದ್ರು. ಆದ್ರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಅದೆಲ್ಲ ನಿಂತು ಹೋಗಿದೆ. ಸದ್ಯ ಅಣ್ಣಾವ್ರ ಮುದ್ದಿನ ಕಂದ ಪುನೀತ್ ರಾಜ್ ಕುಮಾರ ಕೊಂಚ ವಿಭಿನ್ನವಾಗಿ ತಂದೆ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಗಡ್ಡ ಬಿಟ್ಟು ಹೊಸ ಅವತಾರದಲ್ಲಿ ಅಪ್ಪನ ಸ್ಮರಣೆ ಮಾಡಿರುವ ಯುವರತ್ನ, ರಾಜ್ ನಟನೆಯ ಕ್ರಾಂತಿ ವೀರ ಚಿತ್ರದ ಯಾರು ಏನು ಮಾಡುವರು ಮತ್ತು ರಾಜ ನನ್ನ ರಾಜ ಚಿತ್ರದ ನಿನದೇ ನೆನಪು ಹಾಡನ್ನ ಹಾಡಿ ತಂದೆಯನ್ನ ಸ್ಮರಿಸಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದು, ರಾಧಾಕೃಷ್ಣ ರೆಡ್ಡಿ ಹಾಡಿಗೆ ಡೈರೆಕ್ಷನ್ ಮಾಡಿದ್ದಾರೆ.