ಕಸಾಯಿ ಖಾನೆ ಸ್ಥಾಪನೆ ವಿರೋಧಿಸಿ ಹಳೆಕೆಸರೆ ನಿವಾಸಿಗಳಿಂದ ಪ್ರತಿಭಟನೆ - ಮೈಸೂರು ನಗರ ಪಾಲಿಕೆ ಸುದ್ದಿ
🎬 Watch Now: Feature Video
ಮೈಸೂರು: ಹಳೆಕೆಸರೆ ಭಾಗದಲ್ಲಿ ಕಸಾಯಿಖಾನೆ ಆರಂಭಿಸಲು ಮುಂದಾಗುತ್ತಿರುವ ನಗರ ಪಾಲಿಕೆ ಕ್ರಮ ಖಂಡಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು. ಕೆಸರೆಯಲ್ಲಿ ಮಹಾನಗರ ಪಾಲಿಕೆಯ ಒಣ-ಕಸ ಹಸಿ-ಕಸ ವಿಂಗಡಣೆ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಹಳೆ ಗ್ರಾಮಸ್ಥರು, ಕಸಾಯಿ ಖಾನೆ ಆರಂಭ ಮಾಡದಂತೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಪಾಲಿಕೆಯ ಜೋನಲ್ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ಪದೇ ಪದೆ ಇಲ್ಲಿ ಕಸಾಯಿ ಖಾನೆ ಪ್ರಾರಂಭಿಸಲು ನಗರ ಪಾಲಿಕೆ ಮುಂದಾಗುತ್ತಿರುವುದರಿಂದ ಸ್ಥಳೀಯರ ಆರೋಗ್ಯ ಹಾಳು ಮಾಡಲು ಮುಂದಾಗುತ್ತಿದೆ ಎಂದು ಕಿಡಿಕಾರಿದರು.
Last Updated : Oct 16, 2019, 1:55 AM IST